ಬೈಂದೂರು: ಅನಾರೋಗ್ಯದ ಕಾರಣ-ಮಹಿಳೆ ಆತ್ಮಹತ್ಯೆ

ಬೈಂದೂರು ಎ.15(ಉಡುಪಿ ಟೈಮ್ಸ್ ವರದಿ): ತಮ್ಮ ಅನಾರೋಗ್ಯದ ಕಾರಣ ಮನನೊಂದು ಮಹಿಳೆಯೊಬ್ಬರು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಬೈಂದೂರಿನ ಬಾಡ ಬಟಾವಡಿ ಮನೆ ಎಂಬಲ್ಲಿ ನಡೆದಿದೆ.

ಸ್ಥಳೀಯ ನಿವಾಸಿ ಭವಾನಿ (59) ಆತ್ಮಹತ್ಯೆ ಮಾಡಿಕೊಂಡವರು. ಕಳೆದ ಮೂರು ತಿಂಗಳಿನಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಭವಾನಿ ಅವರು, ಕುಂದಾಪುರದ ಆಸ್ಪತ್ರೆಯಲ್ಲಿ ಶಸ್ತ್ರಚಿಕಿತ್ಸೆಗೆ ಒಳಗಾದ ಬಳಿಕವೂ ಗುಣಮುಖವಾಗದ ಕಾರಣ ತಮ್ಮ ಅನಾರೋಗ್ಯದಿಂದ ಮನನೊಂದು ನಿನ್ನೆ ರಾತ್ರಿಯಿಂದ ಇಂದು ಬೆಳಗ್ಗಿನ ಮಧ್ಯಾಹ್ನದ ಅವಧಿಯಲ್ಲಿ ತಾವು ವಾಸವಿದ್ದ ಮನೆಯ ಕೊಟ್ಟಿಗೆಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಬಗ್ಗೆ ಮೃತರ ಪತಿ ನೀಡಿದ ದೂರಿನಂತೆ ಬೈಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply

Your email address will not be published. Required fields are marked *

error: Content is protected !!