ಉಡುಪಿ: ಮಾ.23-ಪೇಜಾವರ ಮಠಾಧೀಶ ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀಪಾದರಿಗೆ “ಗುರುವಂದನೆ” ಕಾರ್ಯಕ್ರಮ
ಉಡುಪಿ ಮಾ.23(ಉಡುಪಿ ಟೈಮ್ಸ್ ವರದಿ): ಶ್ರೀಕೃಷ್ಣ ಸೇವಾ ಬಳಗ, ಶ್ರೀಅದಮಾರು ಮಠ ಆಯೋಜಿಸಿರುವ 30ನೇ “ವಿಶ್ವಾರ್ಪಣಮ್ ” ಕಾರ್ಯಕ್ರಮದಲ್ಲಿ 60 ಸಂವತ್ಸರಗಳ ಸಾರ್ಥಕವಾಗಿ ಪೂರೈಸಿರುವ ಪೇಜಾವರ ಮಠಾಧೀಶರಾದ ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀಪಾದರಿಗೆ “ಗುರುವಂದನೆ” ಕಾರ್ಯಕ್ರಮ ಮಾ.23 ರಂದು ಅಪರಾಹ್ನ 3.30ಕ್ಕೆ ಶ್ರೀಪೂರ್ಣಪ್ರಜ್ಞ ಆಡಿಟೋರಿಯಂನಲ್ಲಿ ನಡೆಯಲಿದೆ ಎಂದು ಶ್ರೀಕೃಷ್ಣ ಸೇವಾಬಳಗದ ವ್ಯವಸ್ಥಾಪಕರಾದ ಗೋವಿಂದ ರಾಜುರವರು ತಿಳಿಸಿದ್ದಾರೆ.
ಈ ಬಗ್ಗೆ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ಶ್ರೀ ಅದಮಾರು ಮಠದ ಹಿರಿಯ ಯತಿಗಳಾದ ಶ್ರೀಶ್ರೀವಿಶ್ವಪ್ರಿಯ ತೀರ್ಥಶ್ರೀಪಾದರ ಅನುಗ್ರಹದೊಂದಿಗೆ ಶ್ರೀ ಈಶಪ್ರಿಯ ತೀರ್ಥ ಶ್ರೀಪಾದರ ದಿವ್ಯ ಉಪಸ್ಥಿತಿಯಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಶ್ರೀಪಾದದ್ವಯರು ಗೋಪೂಜೆ ನಡೆಸುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿಲಿದ್ದಾರೆ. ಹಾಗೂ ಈ ವಿಶ್ವಾರ್ಪಣಮ್ ಕಾರ್ಯಕ್ರಮದಲ್ಲಿ ಮಲ್ಪೆಯ ಪ್ರಕಾಶ್ ರವರು “ಜಗಜ್ಜನನಿ ಭಾರತ” ಹಾಗೂ ಶ್ರೀಕಾಂತ್ ಶೆಟ್ಟಿ ಯವರಿಂದ “ಅವಿನಾಶಿ ಭಾರತ” ಎಂಬ ವಿಷಯಗಳ ಬಗ್ಗೆ ಚಿಂತನೆ ನಡೆಯಲಿದೆ ಎಂದು ತಿಳಿಸಿದರು.
ಈ ಕಾರ್ಯಕ್ರಮದಲ್ಲಿ ಸಮಾಜದಲ್ಲಿ ಸಾಧನೆಗೈದ ಸಾಧಕರಾದ ಬಿ ಎಂ.ಸೋಮಯಾಜಿ (ನಿವೃತ್ತ ಪ್ರಾಧ್ಯಾಪಕರು ಪೂರ್ಣಪ್ರಜ್ಞ ಕಾಲೇಜಿ), ಸಿಎ ವಿ.ಕೆ.ಹರಿಸಾದ್ ಹಾಗೂ ಆಜಂನೇಯದೇವಸ್ಥಾನ ವಿಜಯನಾಗರ ಫರಂಗಿ ಪೇಟೆ ಇವರುಗಳನ್ನು ಸನ್ಮಾನಿಸಲಾಗುವುದು ಹಾಗೂ ಸುಮಾರು 2 ಸಾವಿರ ಮಂದಿ ಈ ಕಾರ್ಯಕ್ರಮದಲ್ಲಿ ಭಾಗವಹಿಸುವ ನಿರೀಕ್ಷೆಯಿದೆ ಎಂದು ತಿಳಿಸಿದರು.
ಹಾಗೂ ಶ್ರೀಪಾದರಿಗೆ ಹಾರಾರ್ಪಣೆಯ ಬದಲು ಗೋಗ್ರಾಸ ನಿಧಿಗೆ ದೇಣಿಗೆಯನ್ನು ನೀಡುವುದರ ಮೂಲಕ ಸೇವೆಯನ್ನು ಸಲ್ಲಿಸ ಬಹುದಾಗಿದೆ. ದೇಣಿಗೆಯನ್ನು ನೀಡಿದವರ ಹೆಸರುಗಳನ್ನು ಕಾರ್ಯಕ್ರಮದಲ್ಲಿ ಉಲ್ಲೇಖಿಸಲಾಗುವುದು ಮತ್ತು ಕಾರ್ಯಕ್ರಮದ ನಂತರ ಬಂದ ಎಲ್ಲಾ ಭಕ್ತರಿಗೆ ಶ್ರೀಪಾದರಿಂದ ಅಯೋಧ್ಯೆಯ ಶ್ರೀರಾಮ ದೇವರ ಮಂತ್ರಾಕ್ಷತೆಯನ್ನು ವಿತರಿಸಲಾಗುವುದು ಎಂದು ಅವರು ತಿಳಿಸಿದರು.
ಕಾರ್ಯಮದಲ್ಲಿ ವಿಷ್ಣುಪ್ರಸಾದ್ ಪಾಡಿಗಾರು,ಶ್ಯಾಮ ಕುಡ್ವ, ಅಜಿತ್ ಪೈ ಹಾಗೂ ಇತರರು ಉಪಸ್ಥಿತರಿದ್ದರು.