ಮಾಧ್ಯಮ ಸಮೀಕ್ಷೆ- ರಾಜ್ಯದಲ್ಲಿ 17 ಕ್ಷೇತ್ರಗಳಲ್ಲಿ ಕಾಂಗ್ರೆಸ್ಗೆ ಮುನ್ನಡೆ
ಬೆಂಗಳೂರು ಮಾ.19: ಲೋಕಸಭಾ ಚುನಾವಣೆ ಇನ್ನೇನು ಕೆಲವು ದಿನಗಳಲ್ಲಿ ಆರಂಭಗೊಳ್ಳಲಿದೆ. ಈ ನಡುವೆ ಮಾಧ್ಯಮವೊಂದು ನಡೆಸಿರುವ ಸಮೀಕ್ಷೆಯಲ್ಲಿ ಕಾಂಗ್ರೆಸ್ ಪಕ್ಷವು 17 ಕ್ಷೇತ್ರಗಳಲ್ಲಿ ಗೆಲ್ಲುವ ಸಾಧ್ಯತೆ ಕಂಡು ಬಂದಿದರೆ. ಬಿಜೆಪಿ ಪಕ್ಷವು 11 ಕ್ಷೇತ್ರಗಳಲ್ಲಿ ಗೆಲ್ಲುವ ಸಾಧ್ಯತೆ ಕಂಡುಬಂದಿದೆ.
ಇತ್ತ ಪ್ರಮುಖ ರಾಜಕೀಯ ಪಕ್ಷಗಳಾದ ಕಾಂಗ್ರೆಸ್ ಮತ್ತು ಬಿಜೆಪಿ ಕೆಲವು ಕ್ಷೇತ್ರಗಳಲ್ಲಿ ತಮ್ಮ ಅಭ್ಯರ್ಥಿಗಳನ್ನೂ ಘೋಷಿಸಿವೆ. ಇದರ ಬೆನ್ನಲ್ಲೇ ಮಾಧ್ಯಮವೊಂದು ಮತದಾರರು ಯಾರ ಕಡೆ ಒಲಿಯಲಿದ್ದಾರೆ ಎಂಬ ಬಗ್ಗೆ ಸಮೀಕ್ಷೆ ನಡೆಸಿದ್ದು, ಈ ಸಮೀಕ್ಷೆಯಲ್ಲಿ ನಾಳೆಯೇ ಚುನಾವಣೆ ನಡೆದರೆ ನಿಮ್ಮ ಮತ ಯಾರಿಗೆ? ಯಾವ ಪಕ್ಷಕ್ಕೆ ನಿಮ್ಮ ಒಲವು ಎಂಬ ಪ್ರಶ್ನೆಯೊಂದಿಗೆ ಇತರೆ ಪ್ರಶ್ನೆಗಳನ್ನು ಕೇಳಲಾಗಿತ್ತು.
ಈ ಮೆಗಾ ಸಮೀಕ್ಷೆಯಲ್ಲಿ ಕಾಂಗ್ರೆಸ್ ಪಕ್ಷವು 17 ಕ್ಷೇತ್ರಗಳಲ್ಲಿ ಗೆಲ್ಲುವ ಸಾಧ್ಯತೆ ಕಂಡು ಬಂದಿದರೆ. ಬಿಜೆಪಿ ಪಕ್ಷವು 11 ಕ್ಷೇತ್ರಗಳಲ್ಲಿ ಗೆಲ್ಲುವ ಸಾಧ್ಯತೆ ಕಂಡುಬಂದಿದೆ.
ಕಳೆದ ಬಾರಿಯ ವಿಧಾನ ಸಭಾ ಚುನಾವಣೆ ಬಗ್ಗೆ ಇದೇ ಮಾಧ್ಯಮ ನಡೆಸಿದ ಸಮೀಕ್ಷೆಯ ಫಲಿತಾಂಶ ಇತರ ಎಲ್ಲಾ ಫಲಿತಾಂಶಗಳಿಗಿಂತಲೂ ಹೆಚ್ಚು ಕರಾರುವಕ್ಕಾಗಿತ್ತು.
ಇದಿಗ ಈ ಬಾರಿಯೂ ಲೋಕಸಭಾ ಚುನಾವಣೆಗಳು ಘೋಷಣೆಯಾಗುವ ಹಾಗೂ ಯಾವುದೇ ಕ್ಷೇತ್ರದ ಅಭ್ಯರ್ಥಿಗಳು ಘೋಷಣೆಯಾಗುವ ಮುನ್ನ ನಡೆಸಿರುವ ಸಮೀಕ್ಷೆಯ ಫಲಿತಾಂಶಗಳ ಹೊರಬಿದ್ದಿದ್ದು, ಭಾರೀ ಕುತೂಹಲ ಮೂಡಿಸಿದೆ.
ಫೆ.15ರಿಂದ ಮಾರ್ಚ್ 5 ರ ವರೆಗೆ ನಡೆದ ಈ ಸಮೀಕ್ಷೆಗೆ ಒಟ್ಟು 52, 678 ಜನರನ್ನು ಒಳಪಡಿಸಲಾಗಿತ್ತು. ಈ ಸಮೀಕ್ಷೆಯ ಆಧಾರದಲ್ಲಿ ಕಾಂಗ್ರೆಸ್ ಪಡೆಯಲಿರುವ ಮತಪ್ರಮಾಣ (ವೋಟ್ ಶೇರ್) 43.77%, ಬಿಜೆಪಿ –ಜೆಡಿಎಸ್ ಪಡೆಯಲಿರುವ ಮತಪ್ರಮಾಣ- 42.35%. ಕಾಂಗ್ರೆಸ್ ಪರವಾಗಿ ಹೆಚ್ಚು ಒಲವು ತೋರಿದ ಕ್ಷೇತ್ರಗಳ ಸಂಖ್ಯೆ- 17, ಬಿಜೆಪಿ ಪರವಾಗಿ ಹೆಚ್ಚು ಒಲವು ತೋರಿಸಿದ ಕ್ಷೇತ್ರಗಳ ಸಂಖ್ಯೆ- 11 ಆಗಿದೆ. ಅದರಂತೆ ಈ ಸಮೀಕ್ಷೆಯ ರೇಸ್ನಲ್ಲಿ
ಕಾಂಗ್ರೆಸ್ ಮುಂದಿರುವುದು ಕಂಡುಬರುತ್ತದೆ.
ಇದರ ಜೊತೆಗೆ ಈ ಸಮೀಕ್ಷೆಯಲ್ಲಿ 76% ದಷ್ಟು ಮಂದಿ ನರೇಂದ್ರ ಮೋದಿ ಅಧಿಕಾರ ನಡೆಸಿದ ಕಳೆದ 10 ವರ್ಷಗಳಲ್ಲಿ ಬೆಲೆ ಏರಿಕೆ ಹೆಚ್ಚಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಹಾಗೂ 42% ದಷ್ಟು ಮಂದಿ ಇದೇ ಅವಧಿಯಲ್ಲಿ ಬಡವ – ಶ್ರೀಮಂತರ ನಡುವೆ ಅಂತರ ಹೆಚ್ಚಿದೆ ಎಂದು ಅಭಿಪ್ರಾಯ ಪಟ್ಟಿದ್ದಾರೆ.
45% ದಷ್ಟು ಮಂದಿ ನರೇಂದ್ರ ಮೋದಿ ಆಳ್ವಿಕೆಯಲ್ಲಿ ಭ್ರಷ್ಟಾಚಾರ ಹೆಚ್ಚಾಗಿದೆ ಎಂದರೆ 53% ದಷ್ಟು ಮಂದಿ ಕಳೆದ 10 ವರ್ಷಗಳಲ್ಲಿ ನಿರುದ್ಯೋಗ ಹೆಚ್ಚಿದೆ ಹಾಗೂ 47% ದಷ್ಟು ಮಂದಿ ವಿಶ್ವಮಟ್ಟದಲ್ಲಿ ಭಾರತದ ಇಮೇಜು ಜಾಸ್ತಿಯಾಗಿದೆ ಎಂದು ಹೇಳಿದ್ದಾರೆ ಎಂಬುದು ಮಾಧ್ಯಮ ಸಮೀಕ್ಷೆಯಿಂದ ತಿಳಿದು ಬಂದಿದೆ.