ಕಾರ್ಕಳ: ಹಣ ದುಪ್ಪಟ್ಟುಗೊಳಿಸುವ ಆಸೆಗೆ ಬಿದ್ದು 90000 ರೂ. ಕಳೆದುಕೊಂಡ ವ್ಯಕ್ತಿ
ಕಾರ್ಕಳ ಮಾ.18 (ಉಡುಪಿ ಟೈಮ್ಸ್ ವರದಿ) : ಹಣ ದುಪ್ಪಟ್ಟು ಗೊಳಿಸುವ ಆಸೆಗೆ ಬಿದ್ದು ವ್ಯಕ್ತಿಯೊಬ್ಬರು 90,000 ರೂ. ಕಳೆದುಕೊಂಡು ಇದೀಗ ಕಾರ್ಕಳ ಠಾಣಾ ಮೆಟ್ಟಿಲೇರಿದ್ದಾರೆ.
ಕಾರ್ಕಳ ಠಾಣಾ ವ್ಯಾಪ್ತಿಯ ನಿವಾಸಿ ಸಂದೀಪ್ ಎಂಬವರು ಫೈನಾನ್ಸ್ ಕಂಪನಿಯಲ್ಲಿ ಕೆಲಸ ಮಾಡಿಕೊಂಡಿದ್ದು, ಸುಮಾರು 3 ತಿಂಗಳ ಹಿಂದೆ ಯುಟ್ಯೂಬ್ ನಲ್ಲಿ BSH Money Making App ನಲ್ಲಿ ಹಣ ಹಾಕಿ ದುಪ್ಪಟ್ಟು ಮಾಡುವ ಬಗ್ಗೆ ಮಾಹಿತಿ ಇದ್ದಿದ್ದನ್ನು ಕಂಡು https://www.youbsh.com/index/auth/signup/invitecode/Ww6Yal.html ನೇ ಲಿಂಕ್ನ ಮುಖಾಂತಾರ APP ಅನ್ನು ಡೌನ್ ಲೋಡ್ ಮಾಡಿದ್ದರು. ಈ ವೇಳೆ ಸಂದೀಪ್ ಅವರ ವಾಟ್ಸಪ್ ಗೆ ಬಂದ ಸಂದೇಶದಲ್ಲಿ 90,000/- ಹಣವನ್ನು ಹಾಕಿದರೆ ಪ್ರತಿದಿನ ರೂಪಾಯಿ 10,560/- ರಂತೆ 88 ದಿನಗಳು ಹಣವನ್ನು ವಾಪಾಸು ಕೊಡುವುದಾಗಿ ತಿಳಿಸಲಾಗಿತ್ತು. ಇದನ್ನು ನಂಬಿದ ಅವರು ಹಂತ ಹಂತವಾಗಿ ಒಟ್ಟು 90,000 ರೂ. ಹಣವನ್ನು ವರ್ಗಾವಣೆ ಮಾಡಿದರು. ಆದರೆ ಆ ಬಳಿಕ ಆರೋಪಿಗಳು ಯಾವುದೇ ಹಣವನ್ನು ವಾಪಸ್ಸು ನೀಡದೇ ವಂಚಿಸಿದ್ದಾರೆ ಎಂಬುದಾಗಿ ನೀಡಿದ ದೂರಿನಂತೆ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.