ಬ್ರಹ್ಮಾವರ:ಚಿನ್ನದ ಬಳೆಗಳು ಕಳವು: ಮನೆ ಕೆಲಸದಾಕೆ ವಿರುದ್ಧ ದೂರು
ಬ್ರಹ್ಮಾವರ ಮಾ.18(ಉಡುಪಿ ಟೈಮ್ಸ್ ವರದಿ): ಹೆಗ್ಗುಂಜೆ ಗ್ರಾಮದ ಮಂದಾರ್ತಿ ಎಂಬಲ್ಲಿ ಮನೆಯಲ್ಲಿ ಇಟ್ಟಿದ ಚಿನ್ನದ ಬಳೆ ಕಳವಾಗಿರುವ ವಿಚಾರಕ್ಕೆ ಮನೆಯ ಕೆಲಸದಾಕೆ ಕದ್ದಿರುವ ಬಗ್ಗೆ ಸಂಶಯ ವ್ಯಕ್ತಪಡಿಸಿ ಬ್ರಹ್ಮಾವರ ಠಾಣೆಯಲ್ಲಿ ದೂರು ದಾಖಲಾಗಿದೆ.
ಮಂದಾರ್ತಿಯ ನಿವಾಸಿ ನೀತಾ ಯು ಎಂಬವರು ಫೆ.8 ರಂದು ದೇವಸ್ಥಾನಕ್ಕೆ ಹೋದವರು ಪೂಜೆ ಮುಗಿಸಿ ಮನೆಗೆ ಬಂದು ತಾವು ಧರಿಸಿದ್ದ 7 ಪವನ ತೂಕದ 4 ಚಿನ್ನದ ಬಳೆಗಳನ್ನು ಮನೆಯ ಟಿ.ವಿ ಸ್ಟ್ಯಾಂಡ್ ಬಳಿ ಇಟ್ಟಿದ್ದರು. ಆದರೆ ಫೆ.10 ರಂದು ನೋಡುವಾಗ ತಾವು ಇಟ್ಟಿದ್ದ ಚಿನ್ನದ ಬಳೆಗಳು ಕಾಣದೇ ಇದ್ದು ಎಲ್ಲಾ ಕಡೆ ಹುಡುಕಾಡಿದರೂ ಎಲ್ಲೂ ಪತ್ತೆಯಾಗಿರುವುದಿಲ್ಲ. ಈ ಬಗ್ಗೆ ಕೆಲಸ ಮಾಡಿಕೊಂಡಿದ್ದ ಜಾನಕಿ ಯನ್ನು ವಿಚಾರಿಸಿದಾಗ ಹಾರಿಕೆ ಉತ್ತರ ನೀಡಿದ್ದು, ಬಳಿಕ ಪೊಲೀಸ್ ದೂರು ನೀಡುವುದಾಗಿ ತಿಳಿಸಿದ ನಂತರದಿಂದ ಆಕೆ ಮನೆಕೆಲಸಕ್ಕೆ ಬಂದಿರುವುದಿಲ್ಲ ಎಂಬುದಾಗಿ ನೀಡಿದ ದೂರಿನಂತೆ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.