ಉಡುಪಿ: ಸಂವಿಧಾನ ವಿರೋಧಿ ಹೇಳಿಕೆ – ಸಂಸದ ಅನಂತ್ ಕುಮಾರ್ ಹೆಗಡೆ ಪ್ರತಿಕೃತಿಗೆ ಚಪ್ಪಲಿ ಏಟು ನೀಡಿ, ಬೆಂಕಿ ಹಚ್ಚಿ ಪ್ರತಿಭಟನೆ
ಉಡುಪಿ ಮಾ.15: ಸಂಸದ ಅನಂತ್ ಕುಮಾರ್ ಹೆಗಡೆಯವರ ಸಂವಿಧಾನ ವಿರೋಧಿ ಹೇಳಿಕೆ ಖಂಡಿಸಿ ಇಂದು ಅಜ್ಜರಕಾಡಿನ ಹುತಾತ್ಮ ಸ್ಮಾರಕ ಬಳಿ ಕರ್ನಾಟಕ ದಲಿತ ಸಂಘರ್ಷ ಸಮಿತಿ ಮತ್ತು ಸಮಾನ ಮನಸ್ಕ ಸಂಘಟನೆಗಳು ಉಡುಪಿ ಜಿಲ್ಲೆ ವತಿಯಿಂದ ಪ್ರತಿಭಟನೆ ಹಮ್ಮಿಕೊಳ್ಳಲಾಗಿತ್ತು.
ಪ್ರತಿಭಟನೆಲ್ಲಿ ಅನಂತ ಕುಮಾರ್ ಹೆಗ್ಡೆ ವಿರುದ್ಧ ಏಕವಚನದಲ್ಲೇ ಆಕ್ರೋಶ ವ್ಯಕ್ತಪಡಿಸಿದ ದ.ಸಂ.ಸ. ಅಂಬೇಡ್ಕರ್ ವಾದ ಜಿಲ್ಲಾ ಪ್ರಧಾನ ಸಂಚಾಲಕರಾದ ಶ್ರೀ. ಸುಂದರ ಮಾಸ್ತರ್ ಅವರು, ಸಂಸದ ಅನಂತ ಕುಮಾರ್ ಹೆಗಡೆ ಮತ್ತೆ ಸಂವಿಧಾನ ವಿರೋಧಿ ಹೇಳಿಕೆ ನೀಡುವಂತ ನೀಚ ಕೃತ್ಯವನ್ನು ಮಾಡಿದ್ದಾನೆ ನಾಚಿಗೆ, ಮಾನ, ಮರ್ಯಾದೆ ಗೆಟ್ಟ ಸಂಸದ ಅಂತ ಇದ್ರೆ ಅದು ಅನಂತ ಕುಮಾರ್ ಹೆಗ್ಡೆ, ಈತ ತನ್ನ ಬ್ರಾಹ್ಮಣ ಸುದ್ದಿಯನ್ನು ಇನ್ನೂ ಬಿಟ್ಟಿಲ್ಲ. ಅವನ ರಕ್ತದಲ್ಲೇ ಮನು ವಾದ ತುಂಬಿಕೊಂಡಿದೆ ಎಂಬುದು ಅವನ ಹೇಳಿಕೆಗಳಿಂದಲೇ ಗೊತ್ತಾಗುತ್ತದೆ. ಇವನಿಗೆ ಮತ ನೀಡಿ ಗೆಲ್ಲಿಸಿದ್ದು ತಪ್ಪಾಯಿತು ಎಂದು ಮತದಾರರಿಗೆ ಈಗ ಗೊತ್ತಾಗಿದೆ. ಮುಂದಿನ ದಿನಗಳಲ್ಲಿ ಆ ಭಾಗದಲ್ಲಿ ಯಾರೇ ಬಿಜೆಪಿಗರು ಚುನಾವಣೆಗೆ ನಿಂತರೂ ಮತದಾರರು ತಕ್ಕ ಪಾಠ ಕಳಿಸಬೇಕು ಎಂದರು.
ಹಾಗೂ ದೇಶದಲ್ಲಿರುವ ಒಂದೇ ಮತವನ್ನು ಅರ್ಥಪೂರ್ಣವಾಗಿ ಚಲಾಯಿಸಿದರೆ ಬಿಜೆಪಿ ಸರಕಾರವನ್ನು ಕಿತ್ತೊಗಿಲಿಕ್ಕೆ ಸಾಧ್ಯವಿದೆ. ಇದಕ್ಕಾಗಿ ಎಲ್ಲರೂ ಸಂಘಟಿತರಾಗಿ ಕೆಲಸಮಾಡಬೇಕು ಎಂದು ಕರೆ ನೀಡಿದರು.
ಪೌರತ್ವ ಕಾಯ್ದೆಯನ್ನು ಜಾರಿ ಮಾಡಲು ಈಗಾಗಲೇ ಆದೇಶ ಹೊರಬಂದಿದ್ದು ಚುನಾವಣೆಯ ಬಳಿಕ ಇದರ ಬಗ್ಗೆ ದೇಶದಾದ್ಯಂತ ತೀವೃ ಹೋರಾಟ ಮಾಡಿ, ಎಲ್ಲೂ ಕೂಡಾ ಪೌರತ್ವ ಕಾಯ್ದೆ ಜಾರಿ ಬರದ ಹಾಗೆ ನೋಡಿಕೊಳ್ಳಬೇಕು ಎಂದು ತಿಳಿಸಿದರು.
ಈ ವೇಳೆ ಪ್ರತಿಭಟನೆಯಲ್ಲಿ ಮಾತನಾಡಿದ ಪ್ರೊ.ಫಣಿರಾಜ್ ಅವರು, “ಅನಂತ್ ಕುಮಾರ್ ಹೆಗಡೆ ಮಿನಿ ನಾಗರ RSS ಘಟ ಸರ್ಪವಾಗಿದೆ. ಅನಂತ್ ಕುಮಾರ್ ಹೇಳಿಕೆ ಆರ್.ಎಸ್.ಎಸ್ ಹರಡಿದ ವಿಷ. ಅದನ್ನು ಇವರು ನಾಚಿಕೆಯಿಲ್ಲದೆ ಹರಡುತ್ತಿದ್ದಾರೆ. 400 ಸೀಟು ಕೊಡಿ ಸಂವಿಧಾನ ಬದಲಾಯಿಸುತ್ತೇವೆ ಎಂದು ನಾಚಿಕೆಯಿಲ್ಲದೆ ಹೇಳುತ್ತಿದ್ದಾರೆ. ನಾವು ಅರ್ಥ ಮಾಡಿಕೊಳ್ಳಬೇಕಾಗಿದೆ, ಬಿಜೆಪಿಗೆ ಕೊಡುವ ಒಂದೊಂದು ಓಟು ಆರ್.ಎಸ್.ಎಸ್ ನ್ನು ಬಲಪಡಿಸುತ್ತದೆ ಎಂದು ಹೇಳಿದರು.
ಸಿಟಿ ರವಿ ಅವರು ಭಾರತವನ್ನು ಗಣರಾಜ್ಯ ಎನ್ನುವವರು ದೇಶದ್ರೋಹಿಗಳೆಂದು ಹೇಳಿ ಅಂಬೇಡ್ಕರ್ ಅವರನ್ನು ಅವಮಾನಿಸಿದ್ದಾನೆ ಮೊದಲು ಸಿಟಿ ರವಿಗೆ ಧಿಕ್ಕಾರ ಹೇಳಬೇಕು. ಅಂಬೇಡ್ಕರ್ ಪ್ರತಿಮೆ ಮುನ್ನವೇ “ಮನು ಪ್ರತಿಮೆ” ಸ್ಥಾಪಿಸಿ ಅವರು ಅವಮಾನ ಮಾಡಿದ್ದಾರೆ. ಬಿಜೆಪಿಗೆ ಹಾಕುವ ಒಂದೊಂದು ವೋಟು ಮಿನಿ ಸರ್ಪಗಳು ಬೀದಿಯಲ್ಲಿ ಹರಿದಾಡುವಂತೆ ಮಾಡುತ್ತದೆ ಎಂದು ಆಕ್ರೋಶ ವ್ಯಕ್ತಪಡಿಸಿದರು..
ಈ ವೇಳೆ ಉಡುಪಿ ಜಿಲ್ಲಾ ಮುಸ್ಲಿಂ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಇದ್ರೀಸ್ ಹೂಡೆ ಅವರು ಮಾತನಾಡಿ, ದೇಶದ ಉನ್ನತಿ, ಏಕತೆ ಸಾಧ್ಯವಾಗಿದ್ದು ಸಂವಿಧಾನದಿಂದ ಮಾತ್ರವಾಗಿದೆ. ದೇಶದ ಪ್ರಗತಿಗೆ ಮೂಲ ಕಾರಣ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಸಂವಿಧಾನವಾಗಿದೆ. ಅದರ ಕಿಂಚಿತ್ತೂ ಜ್ಞಾನ ಇಲ್ಲದ ಸಂಸದ ಅನಂತ್ ಕುಮಾರ್ ಹೆಗಡೆ ಸಂವಿಧಾನ ವಿರೋಧಿ ಹೇಳಿಕೆ ನೀಡಿದ್ದಾರೆ. ಇಂದು ಬದಲಾಯಿಸಬೇಕಾಗಿರುವುದು ಅವರ ಮನುವಾದಿ ಮಾನಸೀಕತೆಯಾಗಿದೆ ಎಂದು ಹೇಳಿದರು.
ಈ ಹಿಂದೆಯೂ ಈ ರೀತಿಯ ಹೇಳಿಕೆ ನೀಡಿದ್ದರು. ಈಗಲೂ ಆ ಚಾಳಿ ಮುಂದುವರಿಸಿದ್ದಾರೆ. ಸಾಮಾಜಿಕ ನ್ಯಾಯ ಹಾಳು ಮಾಡಲು ಮೇಲ್ವರ್ಗಕ್ಕೆ 10% ಮೀಸಲಾತಿ ತರಲಾಯಿತು. ಸಂವಿಧಾನದ ಆಶಯಗಳಿಗೆ ವಿರುದ್ಧವಾಗಿ ಸಿಎಎ ಕಾನೂನು ತರಲಾಗಿದೆ. ಅನಂತ್ ಕುಮಾರ್ ಹೆಗಡೆ ಬಿಜೆಪಿಯ ಅಜೆಂಡಾದ ದನಿ ಅಷ್ಟೇ. ಪ್ರಜಾಪ್ರಭುತ್ವದಲ್ಲಿ ವಿಚಾರಧಾರೆಗಳ ಅಧಿಕಾರವಲ್ಲ, ಜನರ ಅಧಿಕಾರ ಮುಖ್ಯವಾಗಿದೆ. ಎಲ್ಲರ ಆಶಯ ಪ್ರತಿನಿಧಿಸಬೇಕಾಗಿದೆ ಎಂದರು.
ಪ್ರತಿಭಟನೆಯ ಕೊನೆಯಲ್ಲಿ ಅನಂತ್ ಕುಮಾರ್ ಹೆಗಡೆ ಪ್ರತಿಕೃತಿಗೆ ಚಪ್ಪಲಿ ಏಟು ನೀಡಿ ಬೆಂಕಿ ನೀಡಿ ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಈ ಸಂದರ್ಭದಲ್ಲಿ ಸುಂದರ್ ಮಾಸ್ತರ್, ಮಂಜುನಾಥ್ ಗಿಳಿಯಾರ್,ಸಂವರ್ತ್ ಸಾಹಿಲ್, ಬಾಲಕೃಷ್ಣ ಶೆಟ್ಟಿ, ವೆರೋನಿಕಾ ಕರ್ನೆಲಿಯೋ, ಉಡುಪಿ ಕ್ಯಾಥಲಿಕ್ ಸಭಾ ಮಾಜಿ ಅಧ್ಯಕ್ಷೆ ಮೇರಿ, ಮುಸ್ಲಿಂ ಒಕ್ಕೂಟದ ತಾಲೂಕು ಅಧ್ಯಕ್ಷ ಇರ್ಷಾದ್ ನೇಜಾರ್,ವೆರೋನಿಕಾ ಕರ್ನೆಲಿಯೋ, ಶ್ಯಾಮರಾಜ್ ಬಿರ್ತಿ, ಸುಂದರ್ ಮಾಸ್ತರ್, ಬಾಲಕೃಷ್ಣ ಶೆಟ್ಟಿ, ಕವಿರಾಜ್, ಸಾಲಿಡಾರಿಟಿ ಯೂತ್ ಮೂವ್ಮೆಂಟ್’ನ ನಬೀಲ್ ಗುಜ್ಜರ್ ಬೆಟ್ಟು, ಅಝೀಝ್ ಉದ್ಯಾವರ, ಜಿ.ಎಮ್ ಶರೀಫ್, ಮಂಜುನಾಥ್ ಬಾಳ್ಕುದ್ರು, ನಾಗೇಶ್ ಉದ್ಯಾವರ,ಎಸ್.ಐ.ಓನ ಆಯಾನ್ ಮಲ್ಪೆ,ಬರಹಗಾರ ಸಂವರ್ತ್ ಸಾಹಿಲ್ ಉಪಸ್ಥಿತರಿದ್ದರು.