ಬೈಂದೂರು: ಅಕ್ರಮ ಜಾನುವಾರು ಸಾಗಾಟ ತಡೆದ ಪೊಲೀಸರು
ಬೈಂದೂರು ಮಾ.12(ಉಡುಪಿ ಟೈಮ್ಸ್ ವರದಿ) :ಅಕ್ರಮ ಜಾನುವಾರು ಸಾಗಾಟದ ವಾಹನವನ್ನು ತಡೆದ ಪೊಲೀಸರು 3 ಹಸುವನ್ನು ರಕ್ಷಿಸಿದ್ದಾರೆ.
ಶಿರೂರು ಕಡೆಯಿಂದ ಬೈಂದೂರು ಕಡೆಗೆ ಕಾರಿನಲ್ಲಿ ಜಾನುವಾರು ಸಾಗಿಸುತ್ತಿದ್ದಾರೆ ಎಂಬ ಖಚಿತ ಮಾಹಿತಿ ಪಡೆದ ಬೈಂದೂರು ಠಾಣಾ ಪೊಲೀಸರು ಇಂದು ಬೆಳಿಗ್ಗೆ ಯಡ್ತರೆ ಜಂಕ್ಷನ್ ನಲ್ಲಿ ವಾಹನ ತಡೆಯಲು ಕಾಯುತ್ತಿದ್ದರು. ಈ ವೇಳೆ ಶಿರೂರು ಕಡೆಯಿಂದ ಕುಂದಾಪುರ ಕಡೆಗೆ ಬಂದ ಕಾರನ್ನು ಪೊಲೀಸರು ನಿಲ್ಲಿಸಲು ಸೂಚನೆ ನೀಡಿದಾಗ ಅದರ ಚಾಲಕನು ಕಾರನ್ನು ನಿಲ್ಲಿಸದೇ ಪರಾರಿಯಾಗಲು ಯತ್ನಿಸಿದ್ದಾನೆ. ಈ ವೇಳೆ ಪೊಲೀಸರು ಕಾರನ್ನು ಬೆನ್ನಟ್ಟಿದ್ದು, ಕಾರು ಚಾಲಕನು ನಾವುಂದ ಗ್ರಾಮದ ಕುದ್ರುಕೋಡು ಎಂಬಲ್ಲಿ ಹೋಗುವಾಗ ಕಾರು ನಿಯಂತ್ರಣ ತಪ್ಪಿ ಮರಕ್ಕೆ ಗುದ್ದಿ ಟಯರ್ ಪಂಚರ್ ಆದ ಕಾರಣ ಕಾರನ್ನು ಬಿಟ್ಟು ಚಾಲಕ ಹಾಗೂ ಇತರ ಇಬ್ಬರು ಸ್ಥಳದಿಂಸ ಪರಾರಿಯಾಗಿದ್ದಾರೆ.
ಬಳಿಕ ಪೊಲೀಸರು ಕಾರನ್ನು ಹಾಗೂ ಕಾರಿನಲ್ಲಿದ್ದ 3 ಹಸುಗಳನ್ನು ರಕ್ಷಿಸಿ ವಶಪಡಿಸಿಕೊಂಡಿದ್ದಾರೆ. ಈ ಬಗ್ಗೆ ಬೈಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.