ಕೊಲ್ಲೂರು: ತೆಂಗಿನ ಮರದಿಂದ ಬಿದ್ದು ವ್ಯಕ್ತಿ ಸಾವು

ಕೊಲ್ಲೂರು ಎ.27 (ಉಡುಪಿ ಟೈಮ್ಸ್ ವರದಿ): ತೆಂಗಿನ ಮರದಿಂದ ಆಕಸ್ಮಿಕವಾಗಿ ಬಿದ್ದು ವ್ಯಕ್ತಿಯೊಬ್ಬರು ಮೃತಪಟ್ಟ ಘಟನೆ ಕೊಲ್ಲೂರು ಗ್ರಾಮದ ಕಲ್ಯಾಣಿಗುಡ್ಡೆಯಲ್ಲಿ ನಡೆದಿದೆ. ಗೋವಿಂದ (65) ಮೃತಪಟ್ಟವರು.

ಇವರು ಕೃಷಿ ಕೆಲಸ ಮಾಡಿಕೊಂಡಿದ್ದು, ಎ.26 ರಂದು ಸಂಜೆ ಮನೆಯ ಬಳಿ ಇರುವ ತೆಂಗಿನ ಮರವನ್ನು ಹತ್ತಿ ತೆಂಗಿನ ಕಾಯಿ ಕೊಯ್ಯುತ್ತಿದ್ದಾಗ ಆಕಸ್ಮಿಕವಾಗಿ ಕೈ ತಪ್ಪಿ ಕಾಲು ಜಾರಿ ಬಿದ್ದಿದ್ದಾರೆ. ಸುಮಾರು 25 ಅಡಿ ಎತ್ತರದಿಂದ ನೆಲಕ್ಕೆ ಬಿದ್ದ ಪರಿಣಾಮ ಗಂಬೀರ ಸ್ವರೂಪದ ಗಾಯಗೊಂಡು ಸ್ಥಳದ್ಲಲೇ ಮೃತಪಟ್ಟಿದ್ದಾರೆ. ಈ ಬಗ್ಗೆ ಕೊಲ್ಲೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ

Leave a Reply

Your email address will not be published. Required fields are marked *

error: Content is protected !!