ಚಂದನವನಕ್ಕೆ ಬಿಗ್ ಶಾಕ್: ಕನಸಿನ ರಾಣಿ ಮಾಲಾಶ್ರಿಯ ಪತಿ, ನಿರ್ಮಾಪಕ ರಾಮು ಕೋವಿಡ್’ಗೆ ಬಲಿ

ಬೆಂಗಳೂರು (ಉಡುಪಿ ಟೈಮ್ಸ್ ವರದಿ): ಚಂದನವನದಲ್ಲಿ ಕೋಟಿ ನಿರ್ಮಾಪಕ ಎಂದೇ ಪ್ರಖ್ಯಾತರಾಗಿದ್ದ ಹಾಗೂ ಖ್ಯಾತ ನಟಿ ಕನಸಿನ ರಾಣಿ ಖ್ಯಾತಿಯ ಮಾಲಾಶ್ರೀ ಪತಿ ರಾಮು ಅವರು ಕೊರೊನಾ ಸೋಂಕಿನಿಂದ ಸೋಮವಾರ ಮೃತಪಟ್ಟಿದ್ದಾರೆ.

ಕಳೆದ ಒಂದು ವಾರದ ಹಿಂದೆಯಷ್ಟೇ ನಿರ್ಮಾಪಕ ರಾಮು ಅವರಿಗೆ ಕೊವಿಡ್-19 ಸೋಂಕು ತಗುಲಿರುವುದು ವೈದ್ಯಕೀಯ ತಪಾಸಣೆಯಲ್ಲಿ ದೃಢಪಟ್ಟಿತ್ತು. ತೀವ್ರ ಉಸಿರಾಟ ತೊಂದರೆಯಿಂದ ಬಳಲುತ್ತಿದ್ದ ರಾಮು ಅವರನ್ನು ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಮೂರು ದಿನಗಳಿಂದ ಬೆಂಗಳೂರಿನ ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ರಾಮು ಅವರು ಸೋಮವಾರ ಚಿಕಿತ್ಸೆ ಫಲಿಸದೇ ಕೊನೆಯುಸಿರೆಳೆದಿದ್ದಾರೆ.

ಬಿಗ್ ಬಜೆಟ್ ಸಿನಿಮಾಗಳನ್ನು ನಿರ್ಮಾಣ ಮಾಡಿದ ರಾಮು ಅವರು ಕೋಟಿ ನಿರ್ಮಾಪಕ ಎಂತಲೇ ಪ್ರಖ್ಯಾತಿ ಗಳಿಸಿದ್ದರು. ಲಾಕಪ್ ಡೆತ್, ಕಲಾಸಿಪಾಳ್ಯ, ಎಕೆ 47, ರಾಕ್ಷಸ, ಸಿಬಿಐ ದುರ್ಗಾ ಸೇರಿದಂತೆ 25ಕ್ಕೂ ಹೆಚ್ಚು ಸಿನಿಮಾಗಳನ್ನು ನಿರ್ಮಾಣ ಮಾಡಿದ್ದರು. ಕನಸಿನ ರಾಣಿ ಎಂದೇ ಖ್ಯಾತರಾದ ಮಾಲಾಶ್ರೀ ಹಾಗು ಇಬ್ಬರು ಮಕ್ಕಳನ್ನು ಅಗಲಿದ್ದಾರೆ. ಇವರ ನಿಧನಕ್ಕೆ ಸ್ಯಾಂಡಲ್ ವುಡ್ ಕಂಬನಿ ಮಿಡಿದಿದೆ.

Leave a Reply

Your email address will not be published. Required fields are marked *

error: Content is protected !!