ಕುಂದಾಪುರ: ಹೂಡಿಕೆಯಿಂದ ಲಾಭಾಂಶದ ಆಮಿಷ- ಯುವತಿಗೆ 8 ಲ.ರೂ. ವಂಚನೆ
ಕುಂದಾಪುರ ಮಾ.4(ಉಡುಪಿ ಟೈಮ್ಸ್ ವರದಿ): ಹೂಡಿಕೆ ಮಾಡಿ ಹೆಚ್ಚಿನ ಲಾಭ ಗಳಿಸುವ ಆಸೆ ತೋರಿಸಿ ಯುವತಿಯೊಬ್ಬರಿಗೆ 8 ಲಕ್ಷ ರೂ. ವಂಚಿಸಿ ರುವ ಬಗ್ಗೆ ಕುಂದಾಪುರ ಠಾಣೆಯಲ್ಲಿ ದೂರು ದಾಖಲಾಗಿದೆ.
ಅಕ್ಷತಾ ಎಂಬವರಿಗೆ ಅಪರಿಚಿತ ವ್ಯಕ್ತಿಯು ಮೊಬೈಲ್ಗೆ ಲಿಂಕ್ ನ್ನು ಕಳುಹಿಸಿ ಟಾಸ್ಕ್ ಮಾಡಿ ಹಣಗಳಿಸುವ ಉದ್ಯೋಗದ ಬಗ್ಗೆ ಮಾಹಿತಿ ನೀಡಿದ್ದನು ಅಲ್ಲದೆ ಹೂಡಿಕೆ ಮಾಡಿದಲ್ಲಿ ಅಧಿಕ ಲಾಭ ಬರುವುದಾಗಿ ತಿಳಿಸಿ ಟೆಲಿಗ್ರಾಂ ಅಪ್ಲಿಕೇಶನ್ ನಲ್ಲಿ ಅಕ್ಷತಾ ಅವರನ್ನು ಸಂಪರ್ಕಿಸಿ ಉದ್ಯೋಗದ ಬಗ್ಗೆ ಹೂಡಿಕೆ ಮಾಡಿದಲ್ಲಿ ಅಧಿಕ ಲಾಭ ಬರುವುದಾಗಿ ನಂಬಿಸಿದ್ದನು. ಇದನ್ನು ನಂಬಿದ ಅಕ್ಷತಾ ಅವರು ವ್ಯಕ್ತಿಯು ತಿಳಿಸಿದ ಬ್ಯಾಂಕ್ ಅಕೌಂಟ್ ಗೆ ಒಟ್ಟು ರೂಪಾಯಿ 8,00,000/- ಹಣವನ್ನು ಆನ್ ಲೈನ್ ಮುಖಾಂತರ ವರ್ಗಾವಣೆ ಮಾಡಿದ್ದರು. ಆದರೆ ಆರೋಪಿಗಳು ಅಕ್ಷತಾ ಅವರಿಗೆ ಲಾಭಾಂಶವನ್ನು ನೀಡದೇ, ಹಾಗೂ ಪಡೆದ ಹಣವನ್ನು ವಾಪಾಸು ನೀಡದೇ ವಂಚನೆ ಮಾಡಿದ್ದಾರೆ ಎಂಬುದಾಗಿ ನೀಡಿದ ದೂರಿನಂತೆ ಕುಂದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.