ಮಣಿಪಾಲ: ವಿದ್ಯುತ್ ಸಂರ್ಪಕ ಕಡಿತದ ನಕಲಿ ಸಂದೇಶ- ವ್ಯಕ್ತಿಗೆ 1.69 ಲ.ರೂ. ವಂಚನೆ
ಮಣಿಪಾಲ ಮಾ.4(ಉಡುಪಿ ಟೈಮ್ಸ್ ವರದಿ): ವಿದ್ಯುತ್ ಸಂರ್ಪಕ ಕಡಿತಗೊಳಿಸುವ ನಕಲಿ ಸಂದೇಶ ಕಳುಹಿಸಿ ಅರ್ಜಿ ಭರ್ತಿ ಮಾಡುವ ನೆಪದಲ್ಲಿ ವ್ಯಕ್ತಿಯೊಬ್ಬರ ಖಾತೆಯಿಂದ 1.69 ಲ.ರೂ. ದೋಚಿರುವ ಬಗ್ಗೆ ಮಣಿಪಾಲ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಉಮಾಕಾಂತ್ ಸಿಂಗ್ ಇವರು ಇಂದು ಬೆಳಿಗ್ಗೆ ಮಣಿಪಾಲದ ಮಾಹೆಯಲ್ಲಿದ್ದಾಗ ಮನೆಯ ವಿದ್ಯುತ್ ಸಂರ್ಪಕ ಕಡಿತಗೊಳಿಸುವ ಬಗ್ಗೆ ಒಂದು ಮೆಸೇಜ್ ಬಂದಿತ್ತು. ಈ ಕುರಿತಾಗಿ ಮೆಸೇಜ್ ನಲ್ಲಿ ಸೂಚಿಸಲಾದ ಮೊಬೈಲ್ ನಂಬರ್ ಗೆ ಕರೆ ಮಾಡಿದಾಗ ಕರೆ ಸ್ವೀಕರಿಸಿದ ವ್ಯಕ್ತಿ ಒಂದು ಅರ್ಜಿಯನ್ನು ಭರ್ತಿ ಮಾಡಲು Team Viewer Quick Support App ಡೌನ್ ಲೋಡ್ ಮಾಡುವಂತೆ ತಿಳಿಸಿದ್ದನು. ಇದನ್ನು ನಂಬಿದ ಉಮಾಕಾಂತ್ ಅವರು, App ನ್ನು ಡೌನ್ ಲೋಡ್ ಅರ್ಜಿಯನ್ನು ಭರ್ತಿಗೊಳಿಸುವ ವೇಳೆ ಅವರ ಬ್ಯಾಂಕ್ ಖಾತೆಯಿಂದ ಒಟ್ಟು 1,69,950/- ರೂಪಾಯಿ ಅಪರಿಚಿತ ವ್ಯಕ್ತಿಯ ಖಾತೆಗೆ ವರ್ಗಾವಣೆ ಆಗಿರುತ್ತದೆ ಎಂಬುದಾಗಿ ನೀಡಿದ ದೂರಿನಂತೆ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.