ಉಡುಪಿ: ಮಾ.3-ಪರಿಯಾಳ ಸಮಾಜದ ಸಮುದಾಯ ಭವನ ಉದ್ಘಾಟನೆ
ಉಡುಪಿ ಫೆ.29(ಉಡುಪಿ ಟೈಮ್ಸ್ ವರದಿ): ಕಾಪುವಿನ ಉಚ್ಚಿಲದಲ್ಲಿ ನೂತನವಾಗಿ ನಿರ್ಮಾಣಗೊಂಡಿರುವ ಜಿಲ್ಲಾ ಪರಿಯಾಳ ಸಮಾಜದ ಸಮುದಾಯ ಭವನ ಮಾ.5 ರಂದು ಬೆಳಿಗ್ಗೆ 10 ಗಂಟೆಗೆ ಉದ್ಘಾಟನೆಗೊಳ್ಳಲಿದೆ ಎಂದು ಉಡುಪಿ ಜಿಲ್ಲಾ ಪರಿಯಾಳ ಸಮಾಜ ಸುಧಾರಕರ ಸಂಘದ ಜಿಲ್ಲಾಧ್ಯಕ್ಷ ಯು. ಶಂಕರ್ ಸಾಲಿಯಾನ್ ಅವರು ತಿಳಿಸಿದ್ದಾರೆ.
ಈ ಬಗ್ಗೆ ಮಾಹಿತಿ ನೀಡಿದ ಅವರು, ನೂತನ ಸಮುದಾಯ ಭವನವನ್ನು ಕಾಪು ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಅವರು ಉದ್ಘಾಟಿಸಲಿದ್ದಾರೆ. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜಿಲ್ಲಾ ಪರಿಯಾಳ ಸಮಾಜ ಸುಧಾರಕರ ಸಂಘದ ಜಿಲ್ಲಾಧ್ಯಕ್ಷ ಯು. ಶಂಕರ್ ಸಾಲಿಯಾನ್ ಕಟಪಾಡಿ ಅವರು ವಹಿಸಲಿದ್ದಾರೆ. ಮಾಜಿ ಶಾಸಕ ಲಾಲಾಜಿ ಆರ್ ಮೆಂಡನ್ ಅವರು ದೀಪ ಪ್ರಜ್ವಲಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದಾರೆ ಎಂದು ತಿಳಿಸಿದರು.
ಈ ವೇಳೆ ಸಮಾರಂಭದಲ್ಲಿ ಉಡುಪಿ ಶಾಸಕ ಯಸ್ ಪಾಲ್ ಸುವರ್ಣ, ಬಡಾ ಗ್ರಾಮ ಪಂಚಾಯತ್ ಅಧ್ಯಕ್ಷ ಶಿವಕುಮಾರ್ ಮೆಂಡನ್, ಮಾಜಿ ಸಚಿವರಾದ ವಿನಯ್ ಕುಮಾರ್ ಸೊರಕೆ , ಪ್ರಮೋದ್ ಮಧ್ವರಾಜ್, ಜಿ ಶಂಕರ್ ಫ್ಯಾಮಿಲಿ ಟ್ರಸ್ಟ್ ನ ಪ್ರವರ್ತಕ ಡಾ. ಜಿ ಶಂಕರ್, ಮಂಗಳೂರಿನ ಪಾರಿಯಾಳ ಸಮಾಜ ಮಹಾಸಭಾದ ಅಧ್ಯಕ್ಷ ಪ್ರವೀಣ್ ಕುಮಾರ್ ಸಾಲಿಯಾನ್ ಕಾಪಿಕಾಡ್, ದಕ್ಷಿಣ ಕನ್ನಡ ಜಿಲ್ಲಾ ಪರಿಯಾಳ ಸಮಾಜ ಸುಧಾರಕರ ಸಂಘದ ಅಧ್ಯಕ್ಷ ರಮೇಶ್ ಬಂಗೇರ ಸೂಟರ್ ಪೇಟೆ, ಮುಂಬೈಯ ಪರಿಯಾಳ ಹಿತೈಷಿ ಸಂಘದ ಕೋಶಾಧಿಕಾರಿ ಜಯಪ್ರಕಾಶ್ ಎಸ್ ಸಾಲಿಯಾನ್, ಶ್ರೀ ಸಾಯಿರಾದ ಡೆವಲಪರ್ಸ್ ನ ಉದ್ಯಮಿ ಮನೋಹರ್ ಶೆಟ್ಟಿ , ಮಲ್ಪೆಯ ಬಿಲ್ಲವ ಸೇವಾ ಸಂಘದ ಅಧ್ಯಕ್ಷ ಗೋಪಾಲ್ ಸಿ ಬಂಗೇರ, ಉಡುಪಿ ಜಿಲ್ಲಾ ಸವಿತಾ ಸಮಾಜದ ಅಧ್ಯಕ್ಷ ವಿಶ್ವನಾಥ ಭಂಡಾರಿ ನಿಂಜೂರು , ಉಡುಪಿ ಜಿಲ್ಲಾ ಪರಿಯಾಳ ಮಹಿಳಾ ಸಂಘದ ಅಧ್ಯಕ್ಷೆ ವಸಂತಿ ಭಾಸ್ಕರ್ ನೇಜಾರು, ಕುಂದಾಪುರ ತಾಲೂಕು ಪರಿಯಾಳ ಸಂಘದ ಅಧ್ಯಕ್ಷ ಮಂಜುನಾಥ ಸಾಲಿಯಾನ್ ತ್ರಾಸಿ, ಅಂಬಲಪಾಡಿಯ ಉಡುಪಿ ಜಿಲ್ಲಾ ಸಸವಿಸೌ ಸಹಕಾರಿ ನಿಯಮಿತದ ಅಧ್ಯಕ್ಷ ನವೀನ್ ಚಂದ್ರ ಭಂಡಾರಿ, ಕಾರ್ಕಳ ತಾಲೂಕು ಪರಿಯಾಳ ಸಂಘದ ಅಧ್ಯಕ್ಷ ಸಂಜೀವ ಸಾಲಿಯಾನ್ ಬೆಳುವಾಯಿ, ಕುಂದಾಪುರ ತಾಲೂಕು ಪರಿಯಾಳ ಮಹಿಳಾ ಸಂಘದ ಅಧ್ಯಕ್ಷೆ ಸುಜಾತ ಮಂಜುನಾಥ ತ್ರಾಸಿ ಅವರು ಉಪಸ್ಥಿತರಿರಲಿದ್ದಾರೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಸಂಘದ ಕೋಶಾಧಿಕಾರಿ ಶೇಖರ್ ಸಾಲಿಯನ್, ಕಾರ್ಯದರ್ಶಿ ಸುಧಾಕರ್ ಸಾಲಿಯನ್, ಉಡುಪಿ ಜಿಲ್ಲಾ ಪರಿಯಾಳ ಮಹಿಳಾ ಸಂಘದ ಅಧ್ಯಕ್ಷೆ ವಸಂತಿ ಭಾಸ್ಕರ್ ನೇಜಾರು ಉಪಸ್ಥಿತರಿದ್ದರು.