ಮಣಿಪಾಲ: ರೈಲಿನಲ್ಲಿ ಪ್ರಯಾಣಿಕರೊಬ್ಬರ ಮೊಬೈಲ್ ಕಳವು
ಮಣಿಪಾಲ ಫೆ.28(ಉಡುಪಿ ಟೈಮ್ಸ್ ವರದಿ): ರೈಲಿನಲ್ಲಿ ಪ್ರಯಾಣಿಸುತ್ಯಿದ್ದ ಪ್ತಯಾಣಿಕರೊಬ್ಬರ ಬ್ಯಾಗ್ನಲ್ಲಿದ್ದ ಮೊಬೈಲ್ ಕಳ್ಳತನ ವಾಗಿರುವ ಬಗ್ಗೆ ಮಣಿಪಾಲ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ದಕ್ಷಿಣ ಗೋವಾದ ಮಧುರ (23) ಇವರು ಫೆ.27 ರಂದು ಮಡಗಾಂ ನಿಂದ ಉಡುಪಿಗೆ ರೈಲಿನಲ್ಲಿ ಪ್ರಯಾಣಿಸುತ್ತಿದ್ದರು. ಈ ನಡುವೆ ಬೆಳಗ್ಗಿನ ಜಾವ ಕಾರವಾರ ದಿಂದ ಹೊನ್ನಾವರದ ಮಧ್ಯೆ ಮಧುರ ಅವರ ಬ್ಯಾಗಿನಲ್ಲಿ ಇಟ್ಟಿದ್ದ 18,000/- ರೂ. ಮೌಲ್ಯದ ಮೊಬೈಲ್ನ್ನು ಕಳ್ಳರು ಕಳ್ಳತನ ಮಾಡಿದ್ದಾರೆ. ಈ ಬಗ್ಗೆ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.