ಕುಂದಾಪುರ: ರಾಷ್ಟ್ರೀಯ ವಿಜ್ಞಾನ ದಿನ-ಕಡಲ ಕಿನಾರೆಯಲ್ಲಿ ಅರಳಿದ ಮರಳು ಶಿಲ್ಪ ಕಲಾಕೃತಿ
ಉಡುಪಿ ಫೆ.28(ಉಡುಪಿ ಟೈಮ್ಸ್ ವರದಿ): ರಾಷ್ಟ್ರೀಯ ವಿಜ್ಞಾನ ದಿನದ ಪ್ರಯುಕ್ತ ಕುಂದಾಪುರದ ಕೋಟೇಶ್ವರದ ಹಳೆ ಅಲಿವೆ ಕಡಲ ತೀರದಲ್ಲಿ ಸ್ಯಾಂಡ್ ಥೀಮ್ ತಂಡದಿಂದ ಸುಂದರ ಕಲಾಕೃತಿ ರಚನೆ ಗೊಂಡಿದೆ.
ಅನ್ವೇಷಣೆ, ವಿದ್ಯಮಾನ, ಚದುರುವಿಕೆಯ ಸಾಕ್ಷಿಯಾಗಿ ವಿಜ್ಞಾನಿಗಳ ಸಾರ್ಥಕತೆಯನ್ನು ಸಾರುವ ಸಲುವಾಗಿ ನೊಬೆಲ್ ಪ್ರಶಸ್ತಿ ವಿಜೇತ ಸರ್ ಸಿ.ವಿ ರಾಮನ್ ರನ್ನ ನೆನಪಿಸುವ ಕಲಾ ಕೃತಿಯನ್ನು ರಚಿಸುವ ಮೂಲಕ ರಾಷ್ಟ್ರೀಯ ವಿಜ್ಞಾನ ದಿನವನ್ನು ಆಚರಿಸಲಾಯಿತು. ಈ ಸುಂದರ ಮರಳು ಶಿಲ್ಪ ಕಲಾಕೃತಿಯನ್ನು ಸ್ಯಾಂಡ್ ಥೀಮ್ ತಂಡದ ಹರೀಶ್ ಸಾಗಾ, ಸಂತೋಷ್ ಭಟ್ ಹಾಲಾಡಿ, ಉಜ್ವಲ್ ನಿಟ್ಟಿ ಇವರು ರಚಿಸಿದ್ದಾರೆ.
ಕಡಲ ಕಿನಾರಿಯಲ್ಲಿ ಅರಳಿದ ಈ ಸುಂದರ ಮರಳು ಶಿಲ್ಪ ಕಲಾಕೃತಿಗೆ ಭಾರಿ ಮೆಚ್ಚುಗೆ ವ್ಯಕ್ತವಾಗಿದೆ.