ಚಿತ್ರದುರ್ಗ: ಚಾಲಕನ ನಿಯಂತ್ರಣ ತಪ್ಪಿ ಟೆಂಪೋ ಪಲ್ಟಿ ಮಗು ಸೇರಿ ಮೂವರು ದಾರುಣ ಸಾವು

ಚಿತ್ರದುರ್ಗ ಎ.26 : ಚಾಲಕನ ನಿಯಂತ್ರಣ ತಪ್ಪಿದ ಟೆಂಪೋವೊಂದು ಪಲ್ಟಿಯಾಗಿ ಮಗು ಸೇರಿ ಮೂವರು ದಾರುಣವಾಗಿ ಮೃತಪಟ್ಟ ಘಟನೆ ಇಂದು ಬೆಳಿಗ್ಗೆ ಚಿತ್ರದುರ್ಗದ ಹಿರಿಯೂರು ಪಟ್ಟಣದ ಹೊರ ವಲಯದಲ್ಲಿ ನಡೆದಿದೆ.  ಹಿರಿಯೂರು ನಿವಾಸಿಗಳಾದ ಸೆಲ್ವಿ (35), ದೀಪಿಕಾ (06), ನೀಲಮ್ಮ (29) ಮೃತಪಟ್ಟವರು. ಹಿರಿಯೂರಿನಿಂದ ಚಳ್ಳಕೆರೆ ಕಾಂಕ್ರೀಟ್ ಕೆಲಸಕ್ಕೆಂದು ಟೆಂಪೋದಲ್ಲಿ ಕೂಲಿ ಕಾರ್ಮಿಕರು ಹೋಗುತ್ತಿದ್ದ ವೇಳೆ ಅಪಘಾತ ನಡೆದಿದೆ. ಸ್ಥಳಕ್ಕೆ ಹಿರಿಯೂರು ಸಿಪಿಐ ರಾಘವೇಂದ್ರ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ ಎಂದು ತಿಳಿದು ಬಂದಿದೆ.

Leave a Reply

Your email address will not be published. Required fields are marked *

error: Content is protected !!