ಕೆಪಿಸಿಸಿ ಅಲ್ಪಸಂಖ್ಯಾತರ ವಿಭಾಗದ ಪ್ರಧಾನ ಕಾರ್ಯದರ್ಶಿಯಾಗಿ ಉಡುಪಿ ಶೇಖ್ ವಹೀದ್ ಆಯ್ಕೆ
ಉಡುಪಿ ಫೆ.27(ಉಡುಪಿ ಟೈಮ್ಸ್ ವರದಿ): ಕೆಪಿಸಿಸಿ ಅಲ್ಪಸಂಖ್ಯಾತರ ವಿಭಾಗದ ಪ್ರಧಾನ ಕಾರ್ಯದರ್ಶಿಯಾಗಿ ಉಡುಪಿಯ ಶೇಖ್ ವಹೀದ್ ಅವರು ಆಯ್ಕೆಯಾಗಿದ್ದಾರೆ.
ಕರ್ನಾಟಕದಿಂದ ಆಯ್ಕೆಯಾದ 20 ಮಂದಿಯಲ್ಲಿ ಶೇಖ್ ವಹೀದ್ ಅವರು ಒಬ್ಬರಾಗಿದ್ದಾರೆ. ಎನ್.ಆರ್.ಐ ಉದ್ಯಮಿಯಾಗಿರುವ ಶೇಖ್ ವಹೀದ್ ಅವರು ಕೆಪಿಸಿಸಿಯ ಎನ್.ಆರ್.ಐ ಘಟಕದ ಅಧ್ಯಕ್ಷರಾಗಿದ್ದಾರೆ. ಹಾಗೂ ಅವರು ಸಮಾಜ ಸೇವೆಯಲ್ಲಿ ಸಕ್ರಿಯವಾಗಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ.