ಕೋಟ: ದೇವಸ್ಥಾನದಲ್ಲಿ ವ್ಯಕ್ತಿ ನಾಪತ್ತೆ
ಕೋಟ ಫೆ.24(ಉಡುಪಿ ಟೈಮ್ಸ್ ವರದಿ): ಯಡಾಡಿ ಮತ್ಯಾಡಿ ಗ್ರಾಮದ ನಂದಿಕೇಶ್ವರ ದೇವಸ್ಥಾನದ ಪೂಜೆಯಲ್ಲಿ ಪಾಲ್ಗೊಂಡು ಹೊರಗೆ ಹೋದ ವ್ಯಕ್ತಿಯೊಬ್ಬರು ನಾಪತ್ತೆಯಾಗಿರುವ ಬಗ್ಗೆ ಕೋಟ ಠಾಣೆಯಲ್ಲಿ ದೂರು ದಾಖಲಾಗಿದೆ.
ಮಹಾಬಲ ದೇವಾಡಿಗ (60) ನಾಪತ್ತೆಯಾಗಿರುವವರು. ಇವರು ಫೆ.22 ರಂದು ಯಡಾಡಿ ಮತ್ಯಾಡಿ ಗ್ರಾಮದ ನಂದಿಕೇಶ್ವರ ದೇವಸ್ಥಾನದ ಪೂಜೆಯಲ್ಲಿ ತಮ್ಮ ಪತ್ನಿಯೊಂದಿಗೆ ಪಾಲ್ಗೊಂಡು ಸ್ವಲ್ಪ ಸಮಯದ ನಂತರ ದೇವಸ್ಥಾನದ ಹೊರಗೆ ಹೋದವರು ಮತ್ತೆ ವಾಪಸ್ಸು ಬಾರದೆ ನಾಪತ್ತೆಯಾಗಿದ್ದಾರೆ. ಇವರನ್ನು ಎಲ್ಲಾ ಕಡೆ ಹುಡುಕಾಡಿದರೂ ಎಲ್ಲೂ ಪತ್ತೆಯಾಗಿರುವುದಿಲ್ಲ ಎಂಬುದಾಗಿ ನಾಪತ್ತೆಯಾಗಿರುವವರ ಪತ್ನಿ ನೀಡಿದ ದೂರಿನಂತೆ ಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.