ಉಡುಪಿ: ಹೋಟೆಲ್ ಮ್ಯಾನೇಜರ್ ನಾಪತ್ತೆ
ಉಡುಪಿ ಫೆ.24(ಉಡುಪಿ ಟೈಮ್ಸ್ ವರದಿ): ಇಲ್ಲಿನ ಲಾಡ್ಜ್ ವೊಂದರ ಮ್ಯಾನೇಜರ್ ಕೆಲಸದ ನಿಮಿತ್ತ ಹೊರಗೆ ಹೋದವರು ವಾಪಸ್ಸು ಬಾರದೆ ನಾಪತ್ತೆಯಾಗಿದ್ದಾರೆ.
ಇಮ್ರಾನ್ (41) ನಾಪತ್ತೆಯಾದವರು. ಇವರು ಕಳೆದ ಎರಡು ತಿಂಗಳಿನಿಂದ ಉಡುಪಿಯ ಲಾಡ್ಜ್ ವೊಂದರಲ್ಲಿ ಮ್ಯಾನೇಜರ್ ಆಗಿ ಕೆಲಸ ಮಾಡುತ್ತಿದ್ದರು. ಫೆ.23 ರಂದು ಬೆಳಿಗ್ಗೆ ಲಾಡ್ಜ್ ನಿಂದ ಕೆಲಸದ ನಿಮಿತ್ತ ಹೊರಗೆ ಹೋಗಿ ಬರುತ್ತೇನೆ ಎಂದು ಹೇಳಿ ಹೋದ ಇವರು ಈವರೆಗೂ ವಾಪಸ್ಸು ಲಾಡ್ಜ್ ಗೂ ಬಾರದೇ , ತನ್ನ ಊರಿಗೂ ಹೋಗದೇ ಕಾಣೆಯಾಗಿದ್ದಾರೆ. ಈ ಬಗ್ಗೆ ಲಾಡ್ಜ್ ನ ಮಾಲಕರು ನೀಡಿದ ದೂರಿನಂತೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.