ಉಡುಪಿ: ನಿಷೇಧಿತ ಪ್ಲಾಸ್ಟಿಕ್ ಗೋಡೌನ್ಗೆ ದಾಳಿ -990 ಕೆ.ಜಿ ಪ್ಲಾಸ್ಟಿಕ್ ವಶ
ಉಡುಪಿ ಫೆ.22(ಉಡುಪಿ ಟೈಮ್ಸ್ ವರದಿ): ನಗರ ಸಭಾ ಪೌರಾಯುಕ್ತ ರಾಯಪ್ಪ ಅವರ ನೇತೃತ್ವದಲ್ಲಿ ಇಂದು ನಡೆದ ಪ್ಲಾಸ್ಟಿಕ್ ಕಾರ್ಯಾಚರಣೆಯಲ್ಲಿ ತೆಂಕಪೇಟೆಯ ಬಿಎಸ್ಎನ್ಎಲ್ ರಸ್ತೆಯಲ್ಲಿರುವ ಗೋಡೌನ್ವೊಂದಕ್ಕೆ ದಾಳಿ ಮಾಡಿ ಬರೋಬ್ಬರಿ 990 ಕೆ.ಜಿ ಪ್ಲಾಸ್ಟಿಕ್ನ್ನು ವಶಪಡಿಸಿಕೊಳ್ಳಲಾಗಿದೆ.
ಉಡುಪಿಯನ್ನು ಪ್ಲಾಸ್ಟಿಕ್ ಮುಕ್ತವಾಗಿಸುವ ನಿಟ್ಟಿನಲ್ಲಿ ಪೌರಾಯುಕ್ತರ ನೇತೃತ್ವದಲ್ಲಿ ನಿರಂತರ ಪ್ಲಾಸ್ಟಿಕ್ ಕಾರ್ಯಾಚರಣೆ ನಡೆಯುತ್ತಲಿದೆ. ಈಗಾಗಲೇ ಮಣಿಪಾಲ, ಸಿಟಿ ಹಾಗೂ ಮಲ್ಪೆ ವಿಭಾಗದಲ್ಲಿ ಪ್ಲಾಸ್ಟಿಕ್ ಕಾರ್ಯಾಚರಣೆ ನಡೆಸಿ ಪ್ಲಾಸ್ಟಿಕ್ ನಿಷೇಧದ ಬಗ್ಗೆ ಅಂಗಡಿ ಮಾಲೀಕರು ಹಾಗೂ ಸಾರ್ವಜನಿಕರಲ್ಲಿ ಅರಿವು ಮೂಡಿಸಲಾಗುತ್ತಿದೆ. ಇದರ ಮುಂದುವರಿದ ಭಾಗವಾಗಿ ಇಂದು ಮಧ್ಯಾಹ್ನ ನಗರ ಸಭೆಯ ಪರಿಸರ ಮತ್ತು ಆರೋಗ್ಯ ವಿಭಾಗದ ನೃತೃತ್ವದಲ್ಲಿ ಸಿಟಿ ವಿಭಾಗದಲ್ಲಿ ಕಾರ್ಯಚರಣೆ ಕೈಗೊಂಡಿದ್ದರು. ಈ ವೇಳೆ ಅಂಗಡಿಗಳಿಗೆ ದಾಳಿ ಮಾಡುತ್ತಿದ್ದಾಗ ತೆಂಕಪೇಟೆಯ ಬಿಎಸ್ಎನ್ಎಲ್ ರಸ್ತೆಯಲ್ಲಿರುವ ಶ್ರೀ ಗುರುಕೃಪಾ ಟ್ರೇಡರ್ಸ್ನ ಗೋಡೌನ್ಗೆ ದಾಳಿ ಮಾಡಿ 990 ಕೆಜಿ ಪ್ಲಾಸ್ಟಿಕ್ ಗಳನ್ನು ವಶಪಡಿಲಾಯಿತು. ಈ ಕಾರ್ಯಾಚರಣೆ ವೇಳೆ ಗೋಡೌನಲ್ಲಿ ಪ್ಲಾಸ್ಟಿಕ್ನ್ನು ಸಂಗ್ರಹಿಸಿ ಉಡುಪಿಯ ಬೇರೆ ಬೇರೆ ಅಂಗಡಿ ಮುಂಗಟ್ಟುಗಳಿಗೆ ಪೂರೈಕೆ ಮಾಡುತ್ತಿದ್ದರು ಎಂದು ತಿಳಿದು ಬಂದಿದೆ.
ಈ ಕಾರ್ಯಾಚರಣೆಯಲ್ಲಿ ಉಡುಪಿ ನಗರಸಭೆಯ ಪೌರಾಯುಕ್ತ ರಾಯಪ್ಪ, ಪರಿಸರ ಅಭಿಯಂತರರಾದ ಸ್ನೇಹ, ಪ್ರಭಾರ ಆರೋಗ್ಯ ನಿರೀಕ್ಷಕರುಗಳಾದ ಮನೋಹರ್, ಸುರೇಂದ್ರ ಹಾಗೂ ಹರೀಶ್ ಬಿಲ್ಲವ, ಮತ್ತು ಸೂಪರ್ ವೈಸರ್ಗಳಾದ ನಾಗಾರ್ಜುನ್, ಪ್ರಶಾಂತ್, ಭೋಜ ನಾಯ್ಕ್, ಯೋಗೀಶ್ ಪ್ರಭು, ಸುರೇಶ್ ಶೆಟ್ಟಿ, ಸುರೇಶ್ ಕೇಳ್ಕರ್, ಶ್ರೀಕಾಂತ್, ಯೋಗೀಶ್, ಪೌರಕಾರ್ಮಿಕರಾದ ದಿನೇಶ್, ಭುಜಂಗ ಅವರು ಪಾಲ್ಗೊಂಡಿದ್ದರು.