ಕುಂದಾಪುರ : ಕೋವಿಡ್ ಸಂಕಷ್ಟದಲ್ಲಿ ನಿರಾಶ್ರಿತರಿಗೆ ಅನ್ನ ನೀಡುತ್ತಿರುವ ಸಾಯಿನಾಥ್
ಉಡುಪಿ ಎ.24( ಉಡುಪಿ ಟೈಮ್ಸ್ ವರದಿ): ಕಳೆದ ವರ್ಷ ಕೋವಿಡ್ ಅಲೆಗೆ ಜನರು ಯಾವ ರೀತಿ ಸಂಕಷ್ಟ ಅನುಭವಿಸಿದ್ದರು ಎಂಬುದು ಪ್ರತಿಯೊಬ್ಬರಿಗೂ ಗೊತ್ತಿದೆ. ಇಂತಹ ಸಂದರ್ಭದಲ್ಲಿ
ನಿರಾಶ್ರಿತರು ಹಸಿವನ್ನು ನೀಗಿಸುವಲ್ಲಿ ಅನೇಕರು ಸಹಕರಿಸಿದ್ದರು ಅಂತವರಲ್ಲಿ ಬ್ಯಾಂಕ್ ಆಫ್ ಬರೋಡಾದಲ್ಲಿ ಕೆಲಸ ಮಾಡುತ್ತಿರುವ ಸಾಯಿನಾಥ್ ಶೇಟ್ ಅವರು ಕೂಡಾ ಒಬ್ಬರು. ಇವರು ಕಳೆದ ವರ್ಷ ಲಾಕ್‍ಡೌನ್ ಅವಧಿಯಲ್ಲಿ ಅನ್ನದಾಸೋಹದ ಮೂಲಕ ಅನೇಕ ಅನಾಥರು, ಭಿಕ್ಷುಕರು, ವಲಸೆ ಕಾರ್ಮಿಕರ ಹಸಿವು ನೀಗಿಸಿದ್ದರು. ಈ ಬಗ್ಗೆ ಮಾತನಾಡುವ ಅವರು ಕಳೆದ ವರ್ಷದಂತೆ ಈ ಬಾರಿಯೂ ಲಾಕ್‍ಡೌನ್‍ನಲ್ಲಿ ಅವಶ್ಯಕತೆ ಇದ್ದವರಿಗೆ ನೆರವಾಗಲು ಅನ್ನದಾಸೋಹ ಆರಂಭಿಸಿದ್ದೇವೆ ಆದರೆ ಈ ಭಾರೀ ಮಾಹಿತಿ ಕೊರತೆಯಿಂದ ಕಡಿಮೆ ಜನ ಬಂದಿದ್ದಾರೆ. ಆದರೆ ನನಗೆ ತಿಳಿದಿರುವ ಕಡೆಗಳಲ್ಲೆಲ್ಲಾ ನಾನು ತೆರಳಿ ಊಟ ನೀಡುತ್ತಿದ್ದೇನೆ. ನನ್ನಿಂದ ಸಂಪೂರ್ಣ ಊಟ ಸಿಗುತ್ತದೆ ಎನ್ನಲಾಗುವುದಿಲ್ಲ ಆದರೆ ವ್ಯಕ್ತಿಯ ಒಂದು ಹೊತ್ತಿನ ಹಸಿವನ್ನು ನೀಗಿಸಬಹುದು. ಈಗಾಗಲೇ ದಾನಿಗಳ ಸಹಾಯದಿಂದ ಬೇಕಾಗುವಷ್ಟು ವ್ಯವಸ್ಥೆ ಮಾಡಿಕೊಂಡಿದ್ದು, ಇದೇ ರೀತಿ ದಾನಿಗಳ ನೆರವು ಮುಂದೆಯೂ ಸಿಕ್ಕಿದರೆ ಮುಂದಿನ ದಿನಗಳಲಿ ಅಗತ್ಯ ವಿದ್ದಾಗ ಪ್ರತೀ ಭಾರಿಯೂ ನಿರಾಶ್ರಿತರಿಗೆ ಆಹಾರ ನೀಡುವ ಮೂಲಕ ನೆರವು ನೀಡುವುದಾಗಿ ತಿಳಿಸಿದರು.