ಫೆ.17-18: ಉಳ್ಳಾಲ ಬರಿಕೆ ಗುತ್ತು ಧರ್ಮನೇಮ
ಉಳ್ಳಾಲ ಫೆ.15 : ಉಳ್ಳಾದ ಬರಿಕೆ ಗುತ್ತು ಚಾವಡಿ ಇದರ ಆಶ್ರಯದಲ್ಲಿ ಶ್ರೀ ವೈದ್ಯನಾಥ, ಜುಮಾದಿ, ಬಂಟ ದೈವಗಳ ‘ಧರ್ಮನೇಮ’ ಫೆ.16 ರಿಂದ 18 ರ ವರೆಗೆ ನಡೆಯಲಿದೆ ಎಂದು ಧರ್ಮನೇಮ ಸಮಿತಿ ಅಧ್ಯಕ್ಷ ಸುನೀಲ್ ಕುಮಾರ್ ಶೆಟ್ಟಿ ತಿಳಿಸಿದ್ದಾರೆ.
ಈ ಬಗ್ಗೆ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ಶ್ರೀ ವೈದ್ಯನಾಥ, ಜುಮಾದಿ, ಬಂಟ ದೈವಗಳ ‘ಧರ್ಮನೇಮ’ ಉಚ್ಚಿಲತ್ತಾಯ ನೀಲೇಶ್ವರ ಪದ್ಮನಾಭ ತಂತ್ರಿ ಯವರ ಉಪಸ್ಥಿತಿಯಲ್ಲಿ, ವೈದ್ಯನಾಥ ದೈವಸ್ಥಾನದ ಮುಖ್ಯ ಅರ್ಚಕ ಮುಂಡ ಯಾನೆ ದಾಮೋದರ ಪೂಜಾರಿ ನೇತೃತ್ವದಲ್ಲಿ ನಡೆಯಲಿದೆ ಎಂದು ತಿಳಿಸಿದರು.
ಈ ಧರ್ಮ ನೇಪದ ಪ್ರಯುಕ್ತ ಫೆ.15ರಂದು ಧಾರ್ಮಿಕ ಕಾರ್ಯಕ್ರಮಗಳು ಆರಂಭಗೊಳ್ಳಲಿದ್ದು, 16ರಂದು ಬೆಳಗ್ಗೆ 7ಕ್ಕೆ ಗಣಪತಿ ಹೋಮ, ನಾಗದೇವರಿಗೆ ಕಲಶಾಭಿಷೇಕ, ನಾಗತಂಬಿಲ, ದೈವಗಳಿಗೆ ಪರ್ವ ನಡೆಯಲಿದೆ. 10 ಗಂಟೆಗೆ ಚಪ್ಪರ ಮುಹೂರ್ತ, ರಾತ್ರಿ 8ಕ್ಕೆ ಶ್ರೀ ವೈದ್ಯನಾಥ ಭಂಡಾರಮನೆಯಿಂದ ಭಂಡಾರ ಆಗಮನ ನಡೆಯಲಿದೆ.
17ರಂದು ಬೆಳಗ್ಗೆ 10ಕ್ಕೆ ಶ್ರೀ ಜುಮಾದಿ ಬಂಟ ದೈವದ ನೇಮ, 11.30ಕ್ಕೆ ತಂತ್ರಿಗಳ ಆಗಮನ, 12ಕ್ಕೆ ಪಲ್ಲಪೂಜೆ, ರಾತ್ರಿ 8ಕ್ಕೆ ಶ್ರೀ ವೈದ್ಯನಾಥ ನೇಮ, 12ಕ್ಕೆ ಭಂಡಾರ ಏರುವುದು. ಅಂದು ಮಧ್ಯಾಹ್ನ 2.30ರಿಂದ ಸಂಜೆ 5.30ರವರೆಗೆ ಕುಣಿತ ಭಜನೆ ಹಾಗೂ ಭಕ್ತಿಗಾನ ನಾಟ್ಯ ವೈಭವ ನಡೆಯಲಿದೆ.. ಹಾಗೂ 18ರಂದು ಬೆಳಗ್ಗೆ ಕಲ್ಲುರ್ಟಿ, ಪಂಜುರ್ಲಿ, ಗುಳಿಗ ದೈವಕ್ಕೆ ಎಣ್ಣೆಬೂಳ್ಯ, ರಾತ್ರಿ 9ಕ್ಕೆ ಕಲ್ಲುರ್ಟಿ, ಪಂಜುರ್ಲಿ, ಗುಳಿಗ ದೈವಕ್ಕೆ ನರ್ತನ ಸೇವೆ ನಡೆಯಲಿದೆ ಎಂದು ಮಾಹಿತಿ ನೀಡಿದರು.
ಈ ಸಂದರ್ಭದಲ್ಲಿ ಹಿರಿಯರಾದ ವಿಠಲ ಶೆಟ್ಟಿ ಬೆಜ್ಜಮಾಗಂದಡಿ, ವೈದ್ಯನಾಥ ದೈವಸ್ಥಾನದ ಪ್ರಧಾನ ಅರ್ಚಕ ದಾಮೋದರ ಯಾನೆ ಮುಂಡ ಪೂಜಾರಿ, ವೈದ್ಯನಾಥ ದೈವಸ್ಥಾನದ ಸೇವಾ ಸಮಿತಿ ಉಪಾಧ್ಯಕ್ಷ ರವಿ ಸುವರ್ಣ, ಧರ್ಮನೇಮ ಸಮಿತಿ ಕಾರ್ಯದರ್ಶಿ ಸಂತೋಷ್ ಕುಮಾರ್ ಶೆಟ್ಟಿ, ಕೋಶಾಧಿಕಾರಿ ಜಯಲಕ್ಷ್ಮೀ ಆರ್. ಶೆಟ್ಟಿ, ಉಳ್ಳಾಲ ಬರಿಕೆಗುತ್ತು ಫ್ಯಾಮಿಲಿ ಟ್ರಸ್ಟ್ ಅಧ್ಯಕ್ಷ ವೇಣುಗೋಪಾಲ ಶೆಟ್ಟಿ, ಜಂಟಿ ಕಾರ್ಯದರ್ಶಿ, ಧರ್ಮನೇಮ ಸಮಿತಿ ಪ್ರಧಾನ ಸಂಚಾಲಕ ಪ್ರಕಾಶ್ ಭಂಡಾರಿ ಪನೀರು, ಧರ್ಮನೇಮ ಸಮಿತಿಯ ಮಹಿಳಾ ಸಮಿತಿ ಪ್ರಧಾನ ಸಂಚಾಲಕಿ ಸುಕಲಾ ಭಗವಾನ್ ಶೆಟ್ಟಿ ಕಜೆಕೋಡಿ, ಸಾರ್ವಜನಿಕ ಸಂಪರ್ಕಾಧಿಕಾರಿ ಕೆ.ಸತೀಶ್ ಶೆಟ್ಟಿ, ದೇವದಾಸ್ ಆಳ್ವ ಉಪಸ್ಥಿತರಿದ್ದರು.