ಪಡುಬಿದ್ರೆ: ನಾಯಿಗೆ ವಿಷ ನೀಡಿದ ಆರೋಪ – ವ್ಯಕ್ತಿ ವಿರುದ್ಧ ದೂರು
ಪಡುಬಿದ್ರಿ ಫೆ.15(ಉಡುಪಿ ಟೈಮ್ಸ್ ವರದಿ): ಸಾಕು ನಾಯಿಗೆ ವಿಷ ಮಿಶ್ರಿತ ಆಹಾರ ನೀಡಿದ ಆರೋಪದ ಮೇಲೆ ವ್ಯಕ್ತಿಯೊಬ್ಬರ ವಿರುದ್ಧ ಪಡುಬಿದ್ರೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಆರೋಪಿತ ಗಿದ್ದು ಯಾನೆ ಗಿಡಿಯಾನ್ ಎಂಬಾತ ಕಾಪುವಿನ ಬಡಾ ಗ್ರಾಮದ ರಮೇಶ್ ಎಂಬವರ ಮನೆಯ ಸಾಕುನಾಯಿಗಳಿಗೆ ವಿಷಮಿಶ್ರಿತ ಆಹಾರವನ್ನು ಮನೆಯ ಸಮೀಪ ಇಟ್ಟಿದ್ದು, ಈ ಆಹಾರ ಸೇವಿಸಿದ 2 ನಾಯಿಗಳು ಮೃತಪಟ್ಟಿರುವುದಾಗಿ ರಮೇಶ್ ಅವರು ನೀಡಿದ ದೂರಿನಂತೆ ಪಡುಬಿದ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.