ಕೋಟ:ಮೊಬೈಲ್ ಟವರ್ ಗೆ ಅಳವಡಿಸಿದ್ದ ಕಾರ್ಡ್ ಕಳವು
ಕೋಟ ಫೆ.14(ಉಡುಪಿ ಟೈಮ್ಸ್ ವರದಿ): ಮೊಬೈಲ್ ಟವರ್ ಗೆ ಅಳವಡಿಸಿದ್ದ 5ಜಿ ಬಿಬಿಯು ಕಾರ್ಡ್ನ್ನು ಕದ್ದಿರುವ ಮತ್ತೊಂದು ಪ್ರಕರಣ ಕೋಟ ಠಾಣೆಯಲ್ಲಿ ದಾಖಲಾಗಿದೆ.
ಮಂಗಳೂರಿನ ದಿನೇಶ್ ಕೆ ಎಂಬವರು ಬ್ರಹ್ಮಾವರದ ಶಿರಿಯಾರ ಗ್ರಾಮದ ಸೈಬ್ರಕಟ್ಟೆ ಆಟೋ ನಿಲ್ದಾಣದ ಹಿಂಭಾಗ ಸ್ಥಳದಲ್ಲಿ ಇಂಡಸ್ ಮೊಬೈಲ್ ಕಂಪೆನಿಯ ಟೆಲಿಕಮ್ಯುನಿಕೇಷನ್ ಮೊಬೈಲ್ ಟವರ್ ನಿರ್ಮಿಸಿದ್ದು, ಅದಕ್ಕೆ ಅಳವಡಿಸಿದ್ದ 5ಜಿ ಬಿಬಿಯು ಕಾರ್ಡ್ನ್ನು ಕಳ್ಳರು ಫೆ.9 ರಂದು ಕದ್ದು ಪರಾರಿಯಾಗಿದ್ದಾರೆ ಎಂಬುದಾಗಿ ನೀಡಿದ ದೂರಿನಂತೆ ಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.