ಹ್ಯಾಂಗ್ಯೋ ಐಸ್ ಕ್ರೀಮ್: ಸಾಧನೆಯ ಸಿಂಹಾವಲೋಕನ
ಉಡುಪಿ ಫೆ.14(ಉಡುಪಿ ಟೈಮ್ಸ್ ವರದಿ): ಐಸ್ ಕ್ರೀಮ್ ಪ್ರಿಯರ ನೆಚ್ಚಿನ ಹ್ಯಾಂಗ್ಯೋ ಐಸ್ ಕ್ರೀಮ್ ತನ್ನ 21ನೇ ಸಂಸ್ಥಾಪಕರ ದಿನವನ್ನು ಈ ಬಾರಿ ಇನ್ನೊಂದು ಸಾಧನೆಯ ಮೂಲಕ ಅರ್ಥಪೂರ್ಣವಾಗಿ ಆಚರಿಸಿಕೊಂಡಿತು.
ಹ್ಯಾಂಗ್ಯೋ ಐಸ್ ಕ್ರೀನ್ನ 21 ನೇ ಸಂಸ್ಥಾಪಕರ ದಿನವನ್ನು ಇಂದು ಬೆಂಗಳೂರಿನಲ್ಲಿ ಅದ್ದೂರಿ ಆಚರಿಸಲಾಯಿತು. ಈ ವೇಳೆ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್ಸಿಬಿ) ಇದರೊಂದಿಗೆ ಅಧಿಕೃತ ಐಸ್ ಕ್ರೀಮ್ ಪಾಲುದಾರನಾಗುವ ಮೂಲಕ ಮತ್ತು ಗೌರ್ಮೆಟ್ ಅಂದರೆ ಪ್ರೀಮಿಯಂ ಸರಣಿಯನ್ನು ಪರಿಚಯಿಸುವ ಮೂಲಕ ಸಂಸ್ಥಾಪಕರ ದಿನವನ್ನು ಆಚರಿಸಲಾಯಿತು.
ಈ ವೇಳೆ ಹ್ಯಾಂಗ್ಯೋ ಐಸ್ ಕ್ರೀಮ್ ಸಂಸ್ಥಾಪಕ ಮತ್ತು ವ್ಯವಸ್ಥಾಪಕ ನಿರ್ದೇಶಕ ಪ್ರದೀಪ್ ಪೈ ಅವರು ತಮ್ಮ ಭವಿಷ್ಯದ ಕನಸುಗಳನ್ನು ಹಂಚಿಕೊಂಡರು. “ನಾವು ನಮ್ಮ 21 ನೇ ಸಂಸ್ಥಾಪಕರ ದಿನವನ್ನು ಆಚರಿಸುತ್ತಿರುವಾಗ, ಇಲ್ಲಿಯವರೆಗಿನ ನಮ್ಮ ಪ್ರಯಾಣವನ್ನು ಪ್ರತಿಬಿಂಬಿಸುವುದಲ್ಲದೆ ಭವಿಷ್ಯವನ್ನು ಕುತೂಹಲದಿಂದ ಎದುರು ನೋಡುತ್ತಿದ್ದೇವೆ. ಗೌರ್ಮೆಟ್ ಸರಣಿಯ ಪ್ರಾರಂಭ, ಆರ್ಸಿಬಿ ಜೊತೆಗಿನ ಪಾಲುದಾರಿಕೆ ಮತ್ತು ಹ್ಯಾಂಗೋ ಪ್ರತಿಷ್ಠಾನದ ಸ್ಥಾಪನೆಯು ಸಂಸ್ಥೆಯ ಬೆಳವಣಿಗೆ, ನಾವೀನ್ಯತೆ ಮತ್ತು ಸಾಮಾಜಿಕ ಜವಾಬ್ದಾರಿಯ ಬಗ್ಗೆ ನಮ್ಮ ಬದ್ಧತೆಯನ್ನು ಒತ್ತಿಹೇಳುತ್ತದೆ” ಎಂದು ಅವರು ವಿವರಿಸಿದರು.
ದೂರದೃಷ್ಟಿಯ ಉದ್ಯಮಶೀಲ ಸಂಸ್ಥಾಪಕ ಮತ್ತು ಹ್ಯಾಂಗ್ಯೋ ಐಸ್ ಕ್ರೀಮ್ ಆಡಳಿತ ನಿರ್ದೇಶಕ ಪ್ರದೀಪ್ ಪೈ, ಗೌರವಾನ್ವಿತ ಕಾರ್ಯನಿರ್ವಾಹಕ ನಿರ್ದೇಶಕ ಜಗದೀಶ ಪೈ ಮತ್ತು ಗೌರವಾನ್ವಿತ ಕಾರ್ಯನಿರ್ವಾಹಕ ಅಧ್ಯಕ್ಷ ದಿನೇಶ್ ಪೈ ಅವರು ದೀಪವನ್ನು ಪ್ರಜ್ವಲಿಸುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಸಮಾಜದಲ್ಲಿ ಸಕಾರಾತ್ಮಕ ಪರಿಣಾಮಗಳನ್ನು ತರಲು ಸಂಸ್ಥೆ ಆರಂಭಿಸಿರುವ ‘ಹ್ಯಾಂಗ್ಯೋ ಪ್ರತಿಷ್ಠಾನ’ ಆರಂಭದ ಘೋಷಣೆ. ಯುಕೆ & ಕಂ ಸಂಸ್ಥಾಪಕ ಕೆ. ಉಲ್ಲಾಸ್ ಕಾಮತ್ ಅವರು ಪ್ರತಿಷ್ಠಾನದ ಆರಂಭವನ್ನು ಅಧಿಕೃತವಾಗಿ ಘೋಷಿಸಿದರು. ಫಿಕ್ಕಿ ಅಧ್ಯಕ್ಷ ಹಾಗೂ ಯುಕೆ & ಕಂ ಸಂಸ್ಥಾಪಕ ಕೆ ಉಲ್ಲಾಸ್ ಕಾಮತ್ ಈ ಸಂಭ್ರಮಕ್ಕೆ ಸಾಕ್ಷಿಯಾಗಿದ್ದರು.
ಹ್ಯಾಂಗೋ ಐಸ್ ಕ್ರೀಮ್ 2024 ರ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಕ್ರಿಕೆಟ್ ಋತುವಿಗಾಗಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್ಬಿ) ತಂಡದೊಂದಿಗೆ ತನ್ನ ಪಾಲುದಾರಿಕೆಯನ್ನು ಹೆಮ್ಮೆಯಿಂದ ಘೋಷಿಸಿತು. ರುಚಿಕರವಾದ ಐಸ್ ಕ್ರೀಮ್ ಸವಿಯುವ ಸಂತೋಷದೊಂದಿಗೆ ಕ್ರಿಕೆಟ್ ರೋಮಾಂಚನವನ್ನು ಸಂಯೋಜಿಸುವ ಗುರಿಯನ್ನು ಹೊಂದಿರುವ ಈ ಕಾರ್ಯತಂತ್ರದ ಸಹಯೋಗವು ಎಲ್ಲರಿಂದ ಪ್ರಶಂಸೆಗೆ ಪಾತ್ರವಾಯಿತು. ಮಾರಾಟ ವಿಭಾಗದ ಉಪಾಧ್ಯಕ್ಷರಾದ ಶ್ರೀ ದಿನೇಶ್ ಶೆಣೈ ಮತ್ತು ಶ್ರೀ ಮಂಜುನಾಥ ಅವರ ಮಾರಾಟ ಪರಿಶೀಲನಾ ಸಭೆಯ ಮೂಲಕ ಕಾರ್ಯಕ್ರಮ ಮುಕ್ತಾಯಗೊಂಡಿತು.
ಹ್ಯಾಂಗ್ಯೋ ಐಸ್ ಕ್ರೀಮ್ ಸಂಸ್ಥೆಯ ಇತ್ತೀಚಿನ ಕೊಡುಗೆಯಾದ ‘ಗೌರ್ಮೆಟ್ ಸರಣಿ’ ಯ ಅನಾವರಣವು ಈ ಕಾರ್ಯಕ್ರಮದ ಪ್ರಮುಖ ಆಕರ್ಷಣೆಯಾಗಿತ್ತು. ರಿಯಲ್ ಸ್ಟ್ರಾಬೆರಿ, ಮಡಗಾಸ್ಕರ್ ವೆನಿಲ್ಲಾ, ಬಟರ್ ಸ್ಕಾಚ್ ರಾಯಲ್, ನಟ್ಟಿ ಕ್ಯಾರಮೆಲ್, ಅಲ್ಫೊನ್ಸ್ ಮ್ಯಾಂಗೋ, ಬ್ರೌನೀ ಫಡ್ಜ್ ಈ ಪ್ರೀಮಿಯಂ ಶ್ರೇಣಿಯ ಐಸ್ ಕ್ರೀಮ್ಗಳು. ಈ ಐಸ್ ಕ್ರೀಮ್ ಗಳನ್ನು ಪ್ರೇಮಿಗಳ ರುಚಿಗೆ ಪೊರಕವಾಗಿ ತಯಾರಿಸಲಾಗಿದೆ. ಗುಣಮಟ್ಟ, ನಾವೀನ್ಯತೆ ಮತ್ತು ಸಾಮಾಜಿಕ ಜವಾಬ್ದಾರಿಯ ಬದ್ಧತೆಯೊಂದಿಗೆ, ಹ್ಯಾಂಗೋ ಐಸ್ ಕ್ರೀಮ್ ಭಾರತದಾದ್ಯಂತ ಗ್ರಾಹಕರನ್ನು ಮನಸೂರೆಗೊಳ್ಳುತ್ತಲೇ ಇದೆ. ಪ್ರಸ್ತುತ, ಕಂಪನಿಯು ಕರ್ನಾಟಕ, ಮಹಾರಾಷ್ಟ್ರ, ಗೋವಾ, ಆಂಧ್ರಪ್ರದೇಶ, ತೆಲಂಗಾಣ, ತಮಿಳುನಾಡು ಮತ್ತು ಕೇರಳ ಹೀಗೆ ಏಳು ರಾಜ್ಯಗಳಲ್ಲಿ 30,000ಕ್ಕೂ ಹೆಚ್ಚು ಚಿಲ್ಲರೆ ಮಾರಾಟ ಮಳಿಗೆಗಳನ್ನು ಹೊಂದಿದೆ. ಹ್ಯಾಂಗ್ಯೋ ಐಸ್ ಕ್ರೀಮ್ ದಕ್ಷಿಣ ಭಾರತದ ಪ್ರಮುಖ ಐಸ್ ಕ್ರೀಮ್ ಬ್ರಾಂಡ್ಗಳಲ್ಲಿ ಒಂದಾಗಿ ತನ್ನ ಸ್ಥಾನವನ್ನು ಬಲಪಡಿಸುವ ನಿರೀಕ್ಷೆಯಿದೆ.
1997ರಲ್ಲಿ, ಹ್ಯಾಂಗ್ಯೋ ಐಸ್ ಕ್ರೀಮ್ ಸಂಸ್ಥಾಪಕರಾದ ಸಹೋದರರಾದ ದಿನೇಶ್ ಪೈ ಮತ್ತು ಪ್ರದೀಪ್ ಪೈ ಅವರು ಐಸ್ ಕ್ರೀಮ್ ಉದ್ಯಮ ಕ್ಷೇತ್ರದಲ್ಲಿ ಹೊಸತನ – ಹೊಸ ಮಾರುಕಟ್ಟೆಯ ಸೃಷ್ಟಿಯ ಕನಸಿನೊಂದಿಗೆ ಈ ಪ್ರಯಾಣವನ್ನು ಪ್ರಾರಂಭಿಸಿದರು. ಆಸ್ಟ್ರೇಲಿಯಾ ಪ್ರವಾಸದ ಸಮಯದಲ್ಲಿ ಪರಿಚಯವಾದ ಐಸ್ ಕ್ರೀಮ್ಗಳ ವಿಶಿಷ್ಟ ಲೋಕದಿಂದ ಸ್ಫೂರ್ತಿ ಪಡೆದ ಅವರ ದೂರ ದೃಷ್ಟಿ ಹ್ಯಾಂಗ್ಯೋ ಪಯಣಕ್ಕೆ ಶ್ರೀಕಾರ ಹಾಡಿತು. ಹ್ಯಾಂಗ್ಯೋ ಅವರ ಚೊಚ್ಚಲ ಉತ್ಪನ್ನ ‘ಸೋಫ್ಟಿ’. ಆರಂಭದಲ್ಲೇ ಇದು ಐಸ್ ಕ್ರೀಮ್ ಪ್ರಿಯರ ಮೆಚ್ಚುಗೆಗೆ ಪಾತ್ರವಾಯಿತು. ಮಕ್ಕಳು, ವಯಸ್ಕರು ಸೇರಿದಂತೆ ಎಲ್ಲಾ ವಯೋಮಾನದವರಿಗೆ ಕೈಗೆಟುಕುವ ದರದೊಂದಿಗೆ, ಸ್ವಾದಿಷ್ಟ ರುಚಿಯೊಂದಿಗೆ ಅದು ಎಲ್ಲರ ಮನಸೂರೆಗೊಂಡಿತು. ‘ಗ್ರೇಟ್ ಇಂಡಿಯನ್ ಐಸ್ ಕ್ರೀಮ್ ಸ್ಪರ್ಧೆ 2017 ನಲ್ಲಿ ವಿವಿಧ ವಿಭಾಗಗಳಲ್ಲಿ ಚಿನ್ನ ಮತ್ತು ಬೆಳ್ಳಿ ಪದಕಗಳನ್ನು ಒಳಗೊಂಡಂತೆ ಆರು ಪ್ರತಿಷ್ಠಿತ ಪ್ರಶಸ್ತಿಗಳಿಸಿದೆ.
ಹ್ಯಾಂಗ್ಯೋದ ಉತ್ಪಾದನಾ ಸೌಲಭ್ಯಗಳು ಐಎಸ್ಒ 22000-2018 ಮತ್ತು ಎಫ್ಎಸ್ಎಸ್ಎಐ ಮಾನದಂಡಗಳಿಗೆ ಬದ್ಧವಾಗಿರುತ್ತವೆ ಹಾಗೂ ಉನ್ನತ ದರ್ಜೆಯ ಗುಣಮಟ್ಟ ಮತ್ತು ಸುರಕ್ಷತೆಯನ್ನು ಖಾತ್ರಿಪಡಿಸುತ್ತದೆ. ಆಧುನಿಕ ಚಿಲ್ಲರೆ ವ್ಯಾಪಾರ, ಸಾಮಾನ್ಯ ವ್ಯಾಪಾರ ಮತ್ತು ಆನ್ಲೈನ್ ವೇದಿಕೆಗಳಲ್ಲಿ ದೊಡ್ಡ ಮಟ್ಟದ ಜನಪ್ರಿಯತೆ ಸಾಧಿಸಿರುವ, ಹ್ಯಾಂಗೋ ಐಸ್ ಕ್ರೀಮ್ 3 ದಶಲಕ್ಷಕ್ಕೂ ಹೆಚ್ಚು ಗ್ರಾಹಕರಿಗೆ ಸೇವೆ ಸಲ್ಲಿಸಿವೆ. ದಿನಕ್ಕೆ 1.2 ಲಕ್ಷ ಲೀಟರ್ಗಳ ಸ್ಥಾಪಿತ ಸಾಮಥ್ರ್ಯವನ್ನು ಹೊಂದಿರುವ ಮತ್ತು 30.000 ಚಿಲ್ಲರೆ ಅಂಗಡಿಗಳು, 330 ಚಾನೆಲ್ ಪಾಲುದಾರರು ಮತ್ತು 1000ಕ್ಕೂ ಹೆಚ್ಚು ಉದ್ಯೋಗಿಗಳ ಬೆಂಬಲದೊಂದಿಗೆ ಹ್ಯಾಂಗ್ಯೋ ಅಗ್ರ ಐಸ್ ಕ್ರೀಮ್ ಬ್ರಾಂಡ್ಗಳಲ್ಲಿ ಒಂದಾಗಿದೆ.