ಉಡುಪಿ: ಹೂಡಿಕೆ ಹೆಸರಲ್ಲಿ ವ್ಯಕ್ತಿಗೆ 1.72 ಕೋ. ರೂ. ವಂಚನೆ
ಉಡುಪಿ ಫೆ.7 (ಉಡುಪಿ ಟೈಮ್ಸ್ ವರದಿ) : ಟ್ರೇಡಿಂಗ್‍ನಿಂದ ಲಾಭಾಂಶ ಪಡೆಯುವ ಬಗ್ಗೆ ಆಸೆ ತೋರಿಸಿ ವ್ಯಕ್ತಿಯೊಬ್ಬರಿಂದ 1.72 ಲಕ್ಷ ರೂ. ಹಣವನ್ನು ಹೂಡಿಕೆ ಮಾಡಿಸಿ ಲಾಭಾಂಶ ಹಾಗೂ ಹೂಡಿಕೆ ಹಣ ನೀಡದೇ ವಂಚಿಸಿರುವ ಬಗ್ಗೆ ಉಡುಪಿ ಸೆನ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಈ ಬಗ್ಗೆ ವಂಚನೆಗೆ ಒಳಗಾದ ಕಾರ್ಕಳದ ಸುರೇಶ್ ಎಂಬವರು ಪೊಲೀಸರಿಗೆ ದೂರು ನೀಡಿದ್ದು, ಅದರಂತೆ ಇವರಿಗೆ 2023 ರ ಡಿ.19 ರಂದು ಅಪರಿಚಿತ ವ್ಯಕ್ತಿಗಳು ವಾಟ್ಸಪ್ ಮುಖೇನ ಲಿಂಕ್‍ವೊಂದನ್ನು ಕಳುಹಿಸಿ ಹಣ ಹೂಡಿಕೆಯ ತರಬೇತಿ ಮತ್ತು ಹಣ ಹೂಡಿಕೆಯ ಬಗ್ಗೆ ಮಾಹಿತಿ ತಿಳಿಸಿ, ಟ್ರೆಡಿಂಗ್ ನಿಂದ ಹೆಚ್ಚಿನ ಲಾಭಾಂಶ ಪಡೆಯಬಹುದೆಂದು ಆಸೆ ತೋರಿಸಿದ್ದರು. ಜೊತೆಗೆ ಟ್ರೆಡಿಂಗ್ ಆ್ಯಪ್‍ನ ಲಿಂಕ್ ಕಳುಹಿಸಿದ್ದರು. ಇದನ್ನು ನಂಬಿದ ಸುರೇಶ್ ಅವರು, ಆರೋಪಿಗಳು ಸೂಚಿಸಿದಂತೆ ಹಂತ ಹಂತವಾಗಿ ಒಟ್ಟು 1,72,00,000/- ರೂ. ಹಣವನ್ನು ಪಾವತಿಸಿದ್ದರು. ಆದರೆ ಆರೋಪಿಗಳು ಹೂಡಿಕೆ ಮಾಡಿದ ಹಣವನ್ನಾಗಲಿ ಅಥವಾ ಲಾಭಾಂಶವನ್ನಾಗಲಿ ನೀಡದೇ ನಂಬಿಸಿ ವಂಚಿಸಿದ್ದಾರೆ ಎಂಬುದಾಗಿ ನೀಡಿದ ದೂರಿನಂತೆ ಸೆನ್ ಅಪರಾಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.