ಕಾರ್ಕಳ: ಶಟರ್ ಮುರಿದು ಮಂದಿರದಲ್ಲಿ ಕಳವು

ಕಾರ್ಕಳ ಎ.23 ( ಉಡುಪಿ ಟೈಮ್ಸ್ ವರದಿ): ಕಾರ್ಕಳ ತಾಲೂಕಿನ ಕೌಡೂರು ಗ್ರಾಮದ ಶ್ರೀರಾಮ ಮಂದಿರದಲ್ಲಿ ಕಳವು ನಡೆದಿರುವ ಘಟನೆ ಬೆಳಕಿಗೆ ಬಂದಿದ್ದು .

ಎ.22 ರಂದು ಮಧ್ಯಾಹ್ನದಿಂದ ಎ.23 ರ ಬೆಳಗ್ಗಿನ ಅವಧಿಯಲ್ಲಿ ಈ ಕಳ್ಳತನ ನಡೆದಿದೆ ಎನ್ನಲಾಗಿದ್ದು. ಮಂದಿರದ ಕಬ್ಬಿಣದ ಶಟರ್ ನ್ನು ಮುರಿದು ಒಳ ನುಗ್ಗಿದ ಕಳ್ಳರು ಗರ್ಭಗುಡಿಯ ಬಾಗಿಲನ್ನು ಮುರಿದು ದೇವರ ಫೋಟೋಗೆ ಹಾಕಿದ್ದ 75,000 ರೂ ಮೌಲ್ಯದ ಬೆಳ್ಳಿಯ ಹೂವಿನ ಆಭರಣ, ಕಾಣಿಕೆ ಡಬ್ಬಿಯನ್ನು ಹಾಗೂ ಕಛೇರಿಯ ಡ್ರಾವರನ್ನು ಮುರಿದು ಅದರಲ್ಲಿದ್ದ 3 ,000 ರೂ ನಗದನ್ನು ಕಳವು ಮಾಡಿ ಪರಾರಿಯಾಗಿದ್ದಾರೆ. ಈ ಬಗ್ಗೆ ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply

Your email address will not be published. Required fields are marked *

error: Content is protected !!