ಕೋಟ: ಬಸ್ ಡಿಕ್ಕಿ-ರಸ್ತೆ ದಾಟಲು ನಿಂತಿದ್ದ ವ್ಯಕ್ತಿ ಮೃತ್ಯು
ಕೋಟ ಫೆ.5 (ಉಡುಪಿ ಟೈಮ್ಸ್ ವರದಿ): ಬಸ್ ಡಿಕ್ಕಿ ಹೊಡೆದು ರಸ್ತೆ ದಾಟಲು ನಿಂತಿದ್ದ ವ್ಯಕ್ತಿಯೊಬ್ಬರು ಮೃತಪಟ್ಟ ಘಟನೆ ಉಡುಪಿ-ಕುಂದಾಪುರ ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದಿದೆ.
ಮೃತರನ್ನು ಇಸ್ಮಾಯಿಲ್ ಸಾಹೆಬ್ ಎಂದು ಗುರುತಿಸಲಾಗಿದೆ. ಇವರು ಫೆ.1 ರಂದು ಇಸ್ಮಾಯಿಲ್ ಸಾಹೆಬ್ ಎಂಬವರು ಉಡುಪಿ-ಕುಂದಾಪುರ ರಾ. ಹೆದ್ದಾರಿಯನ್ನು ದಾಟಿ ಡಿವೈಡರ್ ಬಳಿ ತಲುಪುವಾಗ ಉಡುಪಿ ಕಡೆಯಿಂದ ಕುಂದಾಪುರ ಕಡೆಗೆ ಬಸ್ ಅನ್ನು ಅತೀ ವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದ ಬಸ್ ಚಾಲಕ ಬೀಮಪ್ಪ ಎಂಬಾತನು ಡಿವೈಡರ್ ಬಳಿ ನಿಂತಿದ್ದ ಇಸ್ಮಾಯಿಲ್ ಸಾಹೆಬ್ ರವರಿಗೆ ಡಿಕ್ಕಿ ಹೊಡೆದಿದ್ದಾನೆ. ಪರಿಣಾಮ ಇಸ್ಮಾಯಿಲ್ ಸಾಹೆಬ್ ರವರು ರಸ್ತೆಗೆಸೆಯಲ್ಪಟ್ಟು ಗಂಭೀರ ಗಾಯಗೊಂಡಿದ್ದರು. ತಕ್ಷಣ ಅವರನ್ನು ಆಸ್ಪತ್ರೆಗೆ ದಾಖಲಿಸಿದ್ದು ಮಣಿಪಾಲದ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಇಸ್ಮಾಯಿಲ್ ಸಾಹೆಬ್ ಅವರು ಚಿಕಿತ್ಸೆ ಫಲಕಾರಿಯಾಗದೆ ಇಂದು ಬೆಳಿಗ್ಗೆ ಮೃತಪಟ್ಟಿದ್ದಾರೆ ಎಂಬುದಾಗಿ ಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.