ಬೈಂದೂರು: ಮರ ಕಡಿದು ಕಳ್ಳತನ
ಬೈಂದೂರು ಫೆ.5 (ಉಡುಪಿ ಟೈಮ್ಸ್ ವರದಿ): ಯಡ್ತರೆ ಗ್ರಾಮದ ತೂದಳ್ಳಿ ಎಂಬಲ್ಲಿನ ಖಾಸಗಿಯೊಬ್ಬರು ಜಮೀನಿನಲ್ಲಿ ನೆಟ್ಟು ಬೆಳೆಸಿದ್ದ ಸಾಗುವಾನಿ ಮರಗಳನ್ನು ಕಡಿದು ಕಳ್ಳತನ ನಡೆಸಿರುವ ಬಗ್ಗೆ ಬೈಂದೂರು ಠಾಣೆಯಲ್ಲಿ ದೂರು ದಾಖಲಾಗಿದೆ.
ಬೈಂದೂರಿನ ಪ್ರಶಾಂತ್ ಎಂಬವರು ಶಿರೂರಿನ ಅಶೋಕ್ ಇವರಿಂದ ಯಡ್ತರೆ ಗ್ರಾಮದ ತೂದಳ್ಳಿ ಎಂಬಲ್ಲಿ ಜಮೀನನ್ನು ಕ್ರಯಕ್ಕೆ ಪಡೆದಿದ್ದು ಆ ಸ್ಥಳದಲ್ಲಿ ಸಾಗುವಾನಿ ಮರವನ್ನು ಬೆಳೆಸಿದ್ದರು. ಈ ಪೈಕಿ ಸುಮಾರು 50,000 ರೂ. ಮೌಲ್ಯದ ಒಂದು ಸಾಗುವಾನಿ ಮರವನ್ನು ಕಳ್ಳರು ಕಡಿದು ಫೆ.2 ರ ರಾತ್ರಿಯಿಂದ ಫೆ.3ರ ಬೆಳಗ್ಗಿನ ಅವಧಿಯಲ್ಲಿ ಕಳ್ಳತನ ಮಾಡಿಕೊಂಡು ಹೋಗಿದ್ದಾರೆ ಎಂಬುದಾಗಿ ಬೈಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.