ನಾನು ಸತ್ತಿಲ್ಲ, ಫ್ಯಾನ್ಸ್ಗೆ ಸರ್ಪ್ರೈಸ್ ಕೊಟ್ಟೆ- ಮಾದಕ ನಟಿ ಪೂನಂ ಪಾಂಡೆ ಹೇಳಿಕೆ
ಕಾನ್ಸುರ: ನಾನು ಸತ್ತಿಲ್ಲ ಎಂದು ಹಾಟೆಸ್ಟ್ ನಟಿ, ಮಾದಕ ತಾರೆ ಎಂದೇ ಖ್ಯಾತಿ ಪಡೆದ, ಸದಾ ತಮ್ಮ ಉಡುಪಿನಿಂದಲೇ ವಿವಾದ ಸೃಷ್ಟಿಸುತ್ತಿದ್ದ ಪೂನಂ ಪಾಂಡೆ ಹೇಳುವ ಮೂಲಕ ಸಾವಿನ ವಿಚಾರವಾಗಿಯೂ ವಿವಾದ ಸೃಷ್ಟಿಸಿದ್ದಾರೆ.
ಕೆಲ ದಿನಗಳ ಹಿಂದೆಯೇ ಫ್ಯಾನ್ಸ್ಗೆ ಅಚ್ಚರಿಪಡುವ ಸುದ್ದಿ ಕೊಡುವುದಾಗಿ ಹೇಳಿದ್ದರು. ಈಗ ವಿಡಿಯೋ ಮೂಲಕ ತಾನು ಸತ್ತಿಲ್ಲ ಎಂಬುದನ್ನು ಖಚಿತ ಪಡಿಸಿದ್ದಾರೆ.
ಇತ್ತೀಚೆಗೆ ನಡೆದ ಬೈಟ್ ಅವಾರ್ಡ್ಸ್ ಎಂಬ ಕಾರ್ಯಕ್ರಮದಲ್ಲಿ ಪೂನಂ ಭಾಗಿಯಾಗಿದ್ದರು. ಆ ಸಮಯದಲ್ಲಿ ಮಾಧ್ಯಮಗಳಿಗೆ ನೀಡಿದ್ದ ಸಂದರ್ಶನದಲ್ಲಿ ಪೂನಂ ಪಾಂಡೆ, ‘ನಿಮ್ಮ ಮುಂದೆ ಶೀಘ್ರದಲ್ಲಿ ಯಾರೂ ಊಹೆ ಮಾಡಲು ಒಂದು ದೊಡ್ಡ ಸುದ್ದಿ ಬರುತ್ತದೆ, ಕಾಯುತ್ತಿರಿ, ಅದು ಎಲ್ಲರನ್ನೂ ಸರ್ಪ್ರೈಸ್ ಮಾಡುತ್ತದೆ. ನನಗೆ ಫ್ಯಾನ್ಸೆ ಸರ್ಪ್ರೈಸ್ ಕೊಡುವುದು ಎಂದರೆ ಎಲ್ಲಿಲ್ಲದ ಖುಷಿ. ನಾನು ಬದಲಾಗಿದ್ದೇನೆ ಎಂದು ಜನರಿಗೆ ತಿಳಿದಾಗ ಸರ್ಪ್ರೈಸ್ ಎನಿಸುತ್ತದೆ. ಆದ್ದರಿಂದ ಬೇಗನೇ ಸರ್ಪ್ರೈಸ್ ಸಿಗಲಿದ್ದು, ನೀವು ಅದರ ಭಾಗವಾಗಲಿದ್ದೀರಿ. ಎಲ್ಲರಿಗೂ ಶಾಕ್ ಆಗಲಿದೆ. ನಿಮ್ಮ ಪ್ರತಿಕ್ರಿಯೆ ನೋಡಲು ಕಾದಿದ್ದೇನೆ’ ಎಂದು ಹೇಳಿದ್ದರು.
ಫೆಬ್ರವರಿ 2ರಂದು ಉತ್ತರ ಪ್ರದೇಶದಲ್ಲಿರುವ ಅವರ ನಿವಾಸದಲ್ಲಿ ಪೂನಂ ಅವರು ಕೊನೆಯುಸಿರೆಳೆದಿದ್ದಾರೆ ಎಂಬ ಸುದ್ದಿ ಬಿತ್ತರವಾಯಿತು. ಗರ್ಭಕಂಠದ ಕ್ಯಾನ್ಸರ್ ಅವರನ್ನು ಬಲಿ ತೆಗೆದುಕೊಂಡಿತು ಎನ್ನಲಾಗಿತ್ತು. ಇದಕ್ಕೆ ಕಾರಣ, ಪೂನಂ ತಂಗಿ ಹೇಳಿದ ಮಾತು. ಅಕ್ಕ ಗರ್ಭಕಂಠ ಕ್ಯಾನ್ಸರ್ ಸತ್ತಿದ್ದಾಗಿ ಹೇಳಿದ್ದರು.
ಏಕಾಏಕಿ ಸಾವನ್ನಪ್ಪಿದ್ದಾರೆ ಎನ್ನುವ ಸುದ್ದಿ ಬಂದಿದ್ದರಿಂದ ಎಲ್ಲರೂ ಶಾಕ್ ಆಗಿದ್ದರು. ಇದೀಗ ಸಾವಿನ ಹಿಂದೆ ಪ್ರಚಾರದ ಗಿಮಿಕ್ ಇದ್ಯಾ ಎನ್ನುವ ಮಾತು ಕೇಳಿ ಬರುತ್ತಿದೆ.