ಮಣಿಪಾಲ: ಮನೆಯಲ್ಲಿ ವೇಶ್ಯಾವಾಟಿಕೆ ದಂಧೆ- ಮೂವರ ಬಂಧನ
ಮಣಿಪಾಲ ಫೆ.2 (ಉಡುಪಿ ಟೈಮ್ಸ್ ವರದಿ) : ಉಡುಪಿ ಬೊಮ್ಮರಬೆಟ್ಟುವಿನ ಮನೆಯೊಂದರಲ್ಲಿ ನಡೆಯುತ್ತಿದ್ದ ವೇಶ್ಯಾವಾಟಿಕೆ ಅಡ್ಡೆಗೆ ದಾಳಿ ಮಾಡಿದ ಪೊಲೀಸರು ಮೂವರು ಆರೋಪಿಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ
ಪವನ್, ಚೇತನ್ ಸಿ.ಬಿ., ಪಂಜು ಪೊಲೀಸರು ವಶಕ್ಕೆ ಪಡೆದ ಪ್ರಕರಣದ ಆರೋಪಿಗಳು. ಹೆರ್ಗಾ ಗ್ರಾಮದ ಈಶ್ವರ ನಗರದ ರೆಸಿಡೆನ್ಸಿಯೊಂದರ ಸಮೀಪ ಓರ್ವ ವ್ಯಕ್ತಿ ಮಹಿಳೆಯರನ್ನು ಅಕ್ರಮ ವೇಶ್ಯಾವಾಟಿಕೆಗೆ ಕಳುಹಿಸಿಕೊಡುತ್ತಿರುವ ಬಗ್ಗೆ ಖಚಿತ ಮಾಹಿತಿ ಪಡೆದ ಮಣಿಪಾಲ ಠಾಣಾ ಪೊಲೀಸರು ನಿನ್ನೆ ರಾತ್ರಿ ಸ್ಥಳಕ್ಕೆ ದಾಳಿ ಮಾಡಿ ಪವನ್ ಎಂಬಾತನನ್ನು ವಶಕ್ಕೆ ಪಡೆದುಕೊಂಡಿದ್ದರು. ಬಳಿಕ ಈತ ನೀಡಿದ ಮಾಹಿತಿಯ ಆಧಾರದ ಮೇಲೆ ಉಡುಪಿ ಬೊಮ್ಮರಬೆಟ್ಟುವಿನಲ್ಲಿರುವ ಮನೆಯೊಂದಕ್ಕೆ ದಾಳಿ ಮಾಡಿದ ಪೊಲೀಸರು ಚೇತನ್ ಸಿ.ಬಿ. ಮತ್ತು ಪಂಜು ಎಂಬ ಇಬ್ಬರನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಈ ಬಗ್ಗೆ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.