ಕುಂದಾಪುರ: ಕ್ರಿಕೆಟ್ ಆಡಲು ಹೋದ ವ್ಯಕ್ತಿ ನಾಪತ್ತೆ
ಕುಂದಾಪುರ ಜ.31 (ಉಡುಪಿ ಟೈಮ್ಸ್ ವರದಿ): ಕ್ರಿಕೆಟ್ ಆಡಲು ಹೋದ ವ್ಯಕ್ತಿಯೊಬ್ಬರು ವಾಪಸ್ಸು ಮನೆಗೆ ಬಾರದೆ ನಾಪತ್ತೆಯಾಗಿರುವ ಬಗ್ಗೆ ಕುಂದಾಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಕುಂದಾಪುರದ ಕುಂಭಾಶಿ ಗ್ರಾಮದ ತೇಜಾ(24) ನಾಪತ್ತೆಯಾಗಿರುವವರು. ಇವರು ಜ.25 ರಂದು ಕ್ರಿಕೆಟ್ ಆಡಲು ಹೋಗಿ ಬರುತ್ತೇನೆ ಎಂದು ಹೇಳಿ ಹೋದವರು ವಾಪಾಸ್ಸು ಮನೆಗೆ ಬಾರದೆ ನಾಪತ್ತೆಯಾಗಿದ್ದಾರೆ. ಈ ವಿಚಾರವಾಗಿ ತೇಜಾ ರವರ ಜೊತೆಯಲ್ಲಿ ಕ್ರಿಕೆಟ್ ಆಡುತ್ತಿದ್ದ ಪ್ರಜ್ವಲ್ ಎಂಬವರಿಗೆ ಕರೆ ಮಾಡಿ ವಿಚಾರಿಸಿದಾಗ ತೇಜಾ ಅವರು ಬೈಕನ್ನು ಮೈದಾನದಲ್ಲಿಯೇ ಬಿಟ್ಟು ಹೋಗಿರುವುದಾಗಿ ತಿಳಿಸಿದ್ದಾರೆ. ಈ ಬಗ್ಗೆ ನಾಪತ್ತೆಯಾಗಿರುವ ತೇಜಾ ಅವರ ಪತ್ನಿ ನೀಡಿದ ದೂರಿನಂತೆ ಕುಂದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.