ಪಡುಬಿದ್ರೆ: ಆನ್ಲೈನ್ ಜಾಬ್ ಆಮೀಷ- 3.83 ಲಕ್ಷ ರೂ.ವಂಚನೆ
ಪಡುಬಿದ್ರಿ ಜ.31 (ಉಡುಪಿ ಟೈಮ್ಸ್ ವರದಿ): ಆನ್ಲೈನ್ ಜಾಬ್ ಕೊಡಿಸುವುದಾಗಿ ನಂಬಿಸಿ 3.83 ಲಕ್ಷ ರೂ. ಹಣ ಪಡೆದು ವಂಚಿಸಿರುವ ಬಗ್ಗೆ ಪಡುಬಿದ್ರೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಈ ಬಗ್ಗೆ ಪಡುಬಿದ್ರೆಯ ಬೇಬಿ ಎಂಬವರು ಪೊಲೀಸರಿಗೆ ದೂರು ನೀಡಿದ್ದು, ಅದರಂತೆ ಕಂಪೆನಿಯೊಂದರಲ್ಲಿ ತಾಂತ್ರಿಕ ಸಹಾಯಕರಾಗಿ ವರ್ಕ್ ಫ್ರಮ್ ಹೋಮ್ ಕೆಲಸ ಮಾಡಿಕೊಂಡಿರುವ ಇವರು, ಫೆಸ್ಬುಕ್ನಲ್ಲಿ ಬಂದ ಆನ್ಲೈನ್ ಜಾಬ್ ಕುರಿತ ಸಂದೇಶವನ್ನು ಓಪನ್ ಮಾಡಿದ್ದರು. ಹಾಗೂ ಅದರಲ್ಲಿ ಸೂಚಿಸಿದ ಮೊಬೈಲ್ ನಂಬರಿನ ಮೂಲಕ ಚಾಟ್ ಮಾಡಿದಾಗ ಆನ್ಲೈನ್ ಜಾಬ್ ಮೂಲಕ ಹಣ ಗಳಿಸುವ ಬಗ್ಗೆ ಮಾಹಿತಿ ನೀಡಿದ್ದರು. ಅಲ್ಲದೆ ಆ ಬಳಿಕ ಆನ್ಲೈನ್ ಪಾರ್ಟ್ ಟೈಂ ಜಾಬ್ ಮೂಲಕ ಮನೆಯಲ್ಲಿಯೇ ಕೆಲಸ ಮಾಡಿ ಹಣ ಗಳಿಸಬಹುದೆಂದು ನಂಬಿಸಿ ಟೆಲಿಗ್ರಾಂ ಮೂಲಕ ಟಾಸ್ಕ್ ಗಳನ್ನು ನೀಡಿ ಬೇಬಿ ಅವರಿಂದ ಆರೋಪಿತರ ವಿವಿಧ ಖಾತಗಳಿಗೆ ಹಂತ ಹಂತವಾಗಿ ಒಟ್ಟು 3,83,000/- ರೂ. ಹಣವನ್ನು ವರ್ಗಾವಣೆ ಮಾಡಿಸಿಕೊಂಡು ವಾಪಾಸ್ಸು ನೀಡದೆ ವಂಚಿಸಿದ್ದಾರೆ ಎಂಬುದಾಗಿ ಬೇಬಿ ಅವರು ನೀಡಿದ ದೂರಿನಂತೆ ಪಡುಬಿದ್ರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.