ಬೈಂದೂರು: ಸೆಂಟ್ರಿಂಗ್ ಕೆಲಸದ ಸಾಮಾಗ್ರಿ ಕಳ್ಳತನ
ಬೈಂದೂರು ಜ.31 (ಉಡುಪಿ ಟೈಮ್ಸ್ ವರದಿ): ಸೆಂಟ್ರಿಂಗ್ ಕೆಲಸಕ್ಕೆಂದು ಇಟ್ಟಿದ್ದ ಅಪಾರ ಮೌಲ್ಯದ ಕಬ್ಬಿಣದ ಸೆಂಟ್ರಿಂಗ್ ಶೀಟುಗಳನ್ನು ಕಳ್ಳರು ಕಳವು ಮಾಡಿಕೊಂಡು ಹೋಗಿರುವ ಘಟನೆ ಬೈಂದೂರಿನ ಕಿರಿಮಂಜೇಶ್ವರ ಗ್ರಾಮದಲ್ಲಿ ನಡೆದಿದೆ.
ಬೈಂದೂರಿನ ಕಿರಿಮಂಜೇಶ್ವರ ಗ್ರಾಮದ ನಾಗರಾಜ ಅವರು ಸೆಂಟ್ರಿಂಗ್ ಕೆಲಸ ಗುತ್ತಿಗೆ ಪಡೆದು ನಡೆಸಿ ಕೊಂಡಿದ್ದರು. ಅದರಂತೆ ಬೈಂದೂರು ತಾಲೂಕು ಕಿರಿಮಂಜೇಶ್ವರ ಗ್ರಾಮದ ಕಿರಿಮಂಜೇಶ್ವರ ಮಾಧವ ಎಂಬುವವರ ಮನೆಯ ಸೆಂಟ್ರಿಂಗ್ ಕೆಲಸ ವಹಿಸಿಕೊಂಡಿದ್ದು, ಅದಕ್ಕೆ ಬೇಕಾಗುವ ಸಲಕರಣೆ ಗಳನ್ನು ಅವರ ಮನೆಯ ಹತ್ತಿರದ ಖಾಲಿ ಜಾಗದಲ್ಲಿ ಇಟ್ಟಿದ್ದರು. ನಿನ್ನೆ ಬೆಳಿಗ್ಗೆ ಕೆಲಸ ನಿರ್ವಹಿಸಲು ಸ್ಥಳಕ್ಕೆ ಹೋಗಿ ನೋಡಿದಾಗ ಸ್ಥಳದಲ್ಲಿ ಇಟ್ಟಿದ್ದ 70,000 ರೂ. ಮೌಲ್ಯದ 92 ಕಬ್ಬಿಣದ ಸೆಂಟ್ರಿಂಗ್ ಶೀಟುಗಳನ್ನು ಕಳ್ಳರು ಕಳವು ಮಾಡಿಕೊಂಡು ಹೋಗಿರುವುದು ಕಂಡು ಬಂದಿದೆ. ಈ ಬಗ್ಗೆ ನಾಗರಾಜ ಅವರು ನೀಡಿದ ದೂರಿನಂತೆ ಬೈಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.