ಮಣಿಪಾಲ: ಗಾಂಜಾ ಸೇವನೆ-ಇಬ್ಬರ ವಿರುದ್ಧ ದೂರು
ಮಣಿಪಾಲ ಜ.29(ಉಡುಪಿ ಟೈಮ್ಸ್ ವರದಿ): ಗಾಂಜಾ ಸೇವನೆ ಪ್ರಕರಣಕ್ಕೆ ಸಂಬಂಧಿಸಿ ಯುವಕರಿಬ್ಬರ ವಿರುದ್ಧ ಮಣಿಪಾಲ ಪೊಲೀಸರು ದೂರು ದಾಖಲಿಸಿದ್ದಾರೆ.
ಮಣಿಪಾಲ ಠಾಣಾ ಪೊಲೀಸರು ರೌಂಡ್ಸ್ ಕರ್ತವ್ಯದಲ್ಲಿದ್ದ ವೇಳೆ ಸಾರ್ವಜನಿಕ ಸ್ಥಳದಲ್ಲಿ ಅಲ್ವಿನ್ ವರ್ಗೀಸ್ ಅಲೆಕ್ಸ್ (18) ಹಾಗೂ ಶಾನ್ವಾಜ್ (21) ಎಂಬ ಇಬ್ಬರನ್ನು ಮಾದಕ ವಸ್ತು ಸೇವಿಸಿರುವ ಅನುಮಾನದ ಮೇರೆಗೆ ವಶಕ್ಕೆ ಪಡೆದು ವೈದ್ಯಕೀಯ ಪರೀಕ್ಷೆಗೆ ಮಣಿಪಾಲದ ಪಾರೆನ್ಸಿಕ್ ವಿಭಾಗದ ವೈದ್ಯರ ಬಳಿ ಹಾಜರು ಪಡಿಸಿದ್ದರು. ಈ ಇಬ್ಬರ ವೈದ್ಯಕೀಯ ಪರೀಕ್ಷಾ ವರದಿಯಲ್ಲಿ ಗಾಂಜಾ ಸೇವಿಸಿರುವುದು ದೃಢಪಟ್ಟ ಕಾರಣ ಇಬ್ಬರ ವಿರುದ್ಧ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.