ಶಿರ್ವ: ಮಟ್ಕಾ ಜುಗಾರಿ- ಓರ್ವನ ವಿರುದ್ಧ ದೂರು
ಶಿರ್ವಾ ಜ.29(ಉಡುಪಿ ಟೈಮ್ಸ್ ವರದಿ): ಶಿರ್ವಾ ಗ್ರಾಮದ ಅಲ್ಮೇಡ ಕಟ್ಟಡದ ಬಳಿಯ ಸಾರ್ವಜನಿಕ ಸ್ಥಳದಲ್ಲಿ ಮಟ್ಕಾಜುಗಾರಿ ನಡೆಸುತ್ತಿದ್ದ ವ್ಯಕ್ತಿಯ ವಿರುದ್ದ ಶಿರ್ವಾ ಪೊಲೀಸರು ದೂರು ದಾಖಲಿಸಿಕೊಂಡಿದ್ದಾರೆ.
ಈ ಬಗ್ಗೆ ಖಚಿತ ಮಾಹಿತಿ ಪಡೆದ ಶಿರ್ವ ಠಾಣಾ ಪೊಲೀಸರು, ಶಿರ್ವಾ ಗ್ರಾಮದ ಅಲ್ಮೇಡ ಕಟ್ಟಡದ ಬಳಿ ಸಾರ್ವಜನಿಕ ಸ್ಥಳದಲ್ಲಿ ಸಾರ್ವಜನಿಕರಿಂದ ಹಣ ಸಂಗ್ರಹಿಸಿ ಮಟ್ಕಾ ಜುಗಾರಿ ನಡೆಸುತ್ತಿದ್ದ ರುಡಾಲ್ಪ್ ಆರೋಜ ಎಂಬಾತನ ವಿರುದ್ದ ಶಿರ್ವಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.