ಹರಿ ಭಕ್ತರ ಸ್ವಾಗತಕ್ಕೆ ಸಜ್ಜಾಗಿದೆ ಉಡುಪಿ
ಉಡುಪಿ(ಉಡುಪಿ ಟೈಮ್ಸ್ ವರದಿ): ಪೊಡವಿಗೊಡೆಯನ ನಾಡಿನಲ್ಲಿ ಪರ್ಯಯಕ್ಕೆ ಕ್ಷಣಗಣನೆ ಆರಂಭವಾಗಿದೆ. ಸಕಲ ಸಿದ್ದತೆಯೊಂದಿಗೆ ಪುತ್ತಿಗೆ ಶ್ರೀಗಳ ಸರ್ವಜ್ಞ ಪೀಠಾರೋಹಣಕ್ಕೆ ಕಾಲ ಕೂಡಿ ಬರುತ್ತಿದೆ.
2 ವರುಷಗಳಿಗೊಮ್ಮೆ ಮುಕುಂದನ ಪೂಜೆಗೈಯಲು ಅಷ್ಟ ಮಠಗಳಲ್ಲಿ ಅಧಿಕಾರ ಹಸ್ತಾಂತರಗೊಳ್ಳುವ ಕ್ರಮವೇ ಪರ್ಯಾಯ. ಪರಂಪರೆಯ ರಾಜ ಪಥದಲ್ಲಿ ದ್ವೈ ವರ್ಷಕೊಮ್ಮೆ ಪರ್ಯಾಯೋತ್ಸವ ನಡೆಯುತ್ತಿದ್ದು ಇದು ಕೇವಲ ಧಾರ್ಮಿಕತೆಗೆ ಮಾತ್ರವಲ್ಲದೆ, ಸಾಂಸ್ಕೃತಿಕವಾಗಿ, ವ್ಯಾಪರೋದ್ಯಮಕ್ಕೆ, ಪ್ರವಾಸೋದ್ಯಮಕ್ಕೆ ಹೀಗೆ ಎಲ್ಲಾ ಕ್ಷೇತ್ರಗಳಿಗೆ ತನ್ನದೇ ಆದ ರೀತಿಯ ಕೊಡುಗೆಯನ್ನ ನೀಡುತ್ತಿದೆ.
ಜನವರಿ 18 ರಂದು ನಡೆಯುವ ಪುತ್ತಿಗೆ ಪರ್ಯಾಯ ಸಕಲ ಸಿದ್ಧತೆ ನಡೆದಿದ್ದು ಉಡುಪಿ ಸಿಂಗಾರಗೊಂಡಿದ್ದೆ ಅಲ್ಲಲ್ಲಿ ಹಾಕಿರುವ ಕಟೌಟ್ ಬ್ಯಾನರ್ಗಳು ನಿಮ್ಮನ ಕೃಷ್ಣನ ಊರಿಗೆ ಸ್ವಾಗತಿಸುತ್ತದೆ. ಹೂವಿನ ಅಲಂಕಾರದೊಂದಿಗೆ ವಿದ್ಯುತ್ತ್ ದೀಪದ ಅಲಂಕಾರ ನಿಮ್ಮನ ಬೇರೆಯೇ ಲೋಕಕ್ಕೆ ಕರೆದೊಯ್ಯುತ್ತದೆ.
ಬೇರೆ ಬೇರೆ ಊರಿನಿಂದ ಮಠಕ್ಕೆ ಮೆರವಣಿಗೆಯ ಮೂಲಕ ಹರಿದು ಬರುತ್ತಿರುವ ಹಸಿರು ಹೊರೆ ಕಾಣಿಕೆ ರಾಜಾಂಗಣದ ಪಕ್ಕದಲ್ಲಿ ರಾರಾಜಿಸುತ್ತಿದೆ. ಪುತ್ತಿಗೆ ಸ್ವಾಮೀಜಿಗಳ ಅಭಿಮಾನಿಗಳು ದೇಶ ವಿದೇಶದಲ್ಲಿ ಇದ್ದು ಈಗಾಗಲೇ ತಮ್ಮ ಪ್ರಿಯ ಸ್ವಾಮೀಜಿಯ ಪರ್ಯಾಯ ದೀಕ್ಷೆ ನೋಡಲು ವಿದೇಶದಿಂದ ಉಡುಪಿಗೆ ಇಳಿದಿದ್ದಾರೆ.
ಪುತ್ತಿಗೆ ಮಠ ಮೈ ತೊಳೆದು ಸುಣ್ಣ ಬಣ್ಣಗಳಿಂದ ನಳನಳಿಸುತ್ತಿದ್ದು,ಹರಿ ಭಕುತರಿಗೆ ಹಂಚಲು ಪ್ರಸಾದ ತಯಾರಾಗಿದೆ. ದರ್ಬಾರ್ ಗಾಗಿ ರಾಜಾಂಗಣ ಸಿದ್ದವಾಗುತ್ತಿದ್ದು ಒಟ್ಟಿನಲ್ಲಿ ಜ.18 ರಂದು ನಡೆಯುವ ಪರ್ಯಾಯೋತ್ಸವಕ್ಕೆ ಕೇಶವನ ಭಕ್ತರು ಕಾಯುತ್ತಿದ್ದಾರೆ.
ಕಡೆಗೋಲು ಕಂದನ ಪೂಜಾ ಪರ್ಯಾಯಕ್ಕೆ ಪುತ್ತಿಗೆ ಶ್ರೀಗಳ ವಿಶ್ವ ಗೀತಾ ಪರ್ಯಾಯ ಎಂಬ ನಾಮಕಿಂತದಿಂದ ನಡೆಯುವ ಈ ಕಾರ್ಯಕ್ರಮಕ್ಕೆ ಕಡಲತಡಿಯ ಊರು ಸಂಪೂರ್ಣ ಸನ್ನದಗೊಂಡಿದೆ.