ಪುತ್ತಿಗೆ ಪರ್ಯಾಯ ಮಹೋತ್ಸವ: ಆಮಂತ್ರಣ ಪತ್ರ ಸ್ವೀಕರಿಸಿದ ಡಾ.ಟಿ. ಶ್ಯಾಮ್ ಭಟ್
ಉಡುಪಿ: ಕರ್ನಾಟಕ ಸರಕಾರದ ಮಾನವ ಹಕ್ಕು ಆಯೋಗದ ಡಾ.ಟಿ.ಶಾಮ್ ಭಟ್ ಅವರು ಭಾವಿ ಪರ್ಯಾಯ ಶ್ರೀಪುತ್ತಿಗೆ ಮಠಾಧೀಶರಾದ ಶ್ರೀಸುಗುಣೇಂದ್ರ ತೀರ್ಥರಿಂದ ಪರ್ಯಾಯ ಮಹೋತ್ಸವದ ಆಮಂತ್ರಣ ಪತ್ರವನ್ನು ರವಿವಾರ ಸ್ವೀಕರಿಸಿದರು.
ಈ ಸಂದರ್ಭದಲ್ಲಿ ಉದ್ಯಮಿ ಕುಕ್ಕಿಕಟ್ಟೆ ಪ್ರಶಾಂತ್ ಕಾಮತ್, ಕನ್ನರ್ಪಾಡಿ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ವ್ಯವಸ್ಥಾಪನ ಸಮಿತಿಯ ಅಧ್ಯಕ್ಷರಾದ ರಾಘವೇಂದ್ರ ಭಟ್ ಹಾಗೂ ವಕೀಲರಾದ ಎಚ್. ವಿ. ಆರ್ ಆಚಾರ್ಯ ಉಪಸ್ಥಿತರಿದ್ದರು.