ಬೆಹರಿನ್ ನಲ್ಲಿ “ಮಿಸ್ಟರ್ ಮದಿಮಯೆ” ಸಿನಿಮಾ ಪೋಸ್ಟರ್ ಬಿಡುಗಡೆ, ಡಿ. 29 ಕ್ಕೆ ಪ್ರೀಮಿಯರ್ ಶೋ
ಮಂಗಳೂರು(ಉಡುಪಿ ಟೈಮ್ಸ್ ವರದಿ) : ಎಮ್ ಎಮ್ ಎಮ್ ಗ್ರೂಪ್ಸ್ ಬ್ಯಾನರ್ ನಡಿಯಲ್ಲಿ ನಿರ್ಮಾಣವಾದ “ಮಿಸ್ಟರ್ ಮದಿಮಯೆ’ ಸಿನಿಮಾದ ಪೋಸ್ಟರ್ ಪ್ರೀಮಿಯರ್ ಶೋ ದ ಟಿಕೇಟ್ ಬಿಡುಗಡೆ ಬೆಹರಿನ್ ನಲ್ಲಿ ನಡೆಯಿತು.
ಆರ್ ಆ್ಯಂಡ್ ಆರ್ ಸ್ಕ್ವೇರ್ ಪ್ರಾಯೋಜಕತ್ವದಲ್ಲಿ ಕಾರ್ಯಕ್ರಮ ಬೆಹರಿನ್ ನ ಕನ್ನಡ ಸಂಘದಲ್ಲಿ ಜರಗಿತು.
ದಿನೇಶ್ ಪೂಜಾರಿ, ಮನೋಜ್ ಶೆಟ್ಟಿ, ಧನುಷ್ ಕುಲಾಲ್, ದೀಕ್ಷಿತ್ ಸಾಲಿಯಾನ್, ಭಾಸ್ಕರ್ ನಾಯಕ್, ರತೀಶ್ ಭಂಡಾರಿ, ಚೇತನ್ ಕಾರ್ಯಕ್ರಮ ಆಯೋಜಿಸಿದ್ದರು.
ಸಮಾರಂಭದಲ್ಲಿ ಕನ್ನಡ ಸಂಘದ ಮಾಜಿ ಸಾಂಸ್ಕೃತಿಕ ಕಾರ್ಯದರ್ಶಿ ಪ್ರದೀಪ್ ಶೆಟ್ಟಿ, ಆಸ್ಟೀನ್ ಸಂತೋಷ್, ಆನಂದ ಲೋಬೋ, ಜ್ವಾನ್ ದೀಪಕ್, ಸತೀಶ್ ಆಚಾರ್ಯ, ರಾಜೇಶ್ ಶೆಟ್ಟಿ, ಮೋಹನ್ ದಾಸ್ ರೈ, ರಾಮ್ ಪ್ರಸಾದ್ ಅಮ್ಮೆನಡ್ಕ, ಮಹೇಶ್ ಕುಮಾರ್, ರೆಮಿ ದಾಲಿಯ, ಆಯುಷ್ ಶೆಟ್ಟಿ, ರೋಯ್ ಸ್ಟನ್ ಫೆರ್ನಾಂಡೀಸ್, ರೊಝಿತಾ ಮಥಾಯಸ್ ಮೊದಲಾದವರು ಉಪಸ್ಥಿತರಿದ್ದರು. ಕಮಲಾಕ್ಷ ಅಮೀನ್ ಕಾರ್ಯಕ್ರಮ ನಿರ್ವಹಿಸಿದರು. ಡಿಸೆಂಬರ್ 29 ರಂದು ಬೆಹರಿನ್ ನಲ್ಲಿ ಪ್ರೀಮಿಯರ್ ಶೋ ನಡೆಯಲಿದೆ.
ಜನವರಿ 5 ರಂದು ತೆರೆಗೆ
ಮಿಸ್ಟರ್ ಮದಿಮಯೆ ಜನವರಿ 5 ರಂದು ತೆರೆ ಕಾಣಲಿದೆ.
ಸಿನಿಮಾಕ್ಕೆ ಒಂದೇ ಹಂತದಲ್ಲಿ ಸುಮಾರು 20 ದಿನಗಳ ಕಾಲ ಚಿತ್ರೀಕರಣ ನಡೆದಿದೆ.
ಇಲ್ಲಿ ಮುಖ್ಯವಾಗಿ ಸಿನಿಮಾದಲ್ಲಿ ಹೊಸ ಕಲಾವಿದರಿಗೆ ಅವಕಾಶ ನೀಡಲಾಗಿದೆ. ಪ್ರತಿಭಾವಂತರ ತಂಡ ಇಲ್ಲಿ ಸೇರಿಕೊಂಡು ಕೆಲಸ ಮಾಡಿದೆ. ಸಾಯಿಕೃಷ್ಣ ಕುಡ್ಲರಂತಹ ಪ್ರಬುದ್ದ ಕಲಾವಿದರೊಂದಿಗೆ ಹೊಸ ಹುಡುಗರು ಇಲ್ಲಿ ಹೆಜ್ಜೆಹಾಕಿದ್ದಾರೆ. ತಮ್ಮಲ್ಲಿರುವ ಪ್ರತಿಭೆಯನ್ನು ಒರೆಗೆ ಹಚ್ಚಿದ್ದಾರೆ. ಹೀಗಾಗಿ ಹೊಸ ಕಲಾವಿದರ ಹುರುಪು ತಮ್ಮ ಸಿನಿಮಾ ಯಾವಾಗ ಬಿಡುಗಡೆಯಾಗುತ್ತದೆ ಎಂಬ ಕಾತರವೂ ಇದೆ. ನವೀನ್ ಜಿ ಪಿ ಅವರ ನಿರ್ದೇಶನದ ಈ ಸಿನಿಮಾದ ನಾಯಕನಾಗಿ ಸಾಯಿ ಕೃಷ್ಣ ಕುಡ್ಲ ಅವರು ನಟಿಸುತ್ತಿದ್ದು, ಉಳಿದಂತೆ ಪ್ರಮುಖ ಪಾತ್ರಗಳಲ್ಲಿ ಶ್ವೇತಾ ಸುವರ್ಣ, ರವಿಕಾಂತ್ ಪೂಜಾರಿ, ಜ್ಯೋತಿಷ್ ಶೆಟ್ಟಿ, ಸುನೀಲ್ ನೆಲ್ಲಿಗುಡ್ಡೆ, ಕಾಮಿಡಿ ಕಿಲಾಡಿಗಳು ಖ್ಯಾತಿಯ ಪಿಂಕಿ ರಾಣಿ, ರವಿ ರಾಮಕುಂಜ ಕಾಮಿಡಿ ಗ್ಯಾಂಗ್ ಖ್ಯಾತಿಯ ಮನೀಷ್ ಶೆಟ್ಟಿ ಉಪ್ಪಿರ, ಅಕ್ಷಯ್ ಸರಿಪಲ್ಲ, ಸಂದೀಪ್ ಶೆಟ್ಟಿ ರಾಯಿ, ಶರಣ್ ಕೈಕಂಬ, ಪ್ರವೀಣ್ ಮರ್ಕಮೆ, ಸವ್ಯರಾಜ್, ಪೃಥ್ವಿ ಕುಂದರ್ ಪೊಳಲಿ, ಮುಂತಾದವರು ಬಣ್ಣ ಹಚ್ಚಿದ್ದಾರೆ.
ಮಿಥುನ್ ಕೆ ಎಸ್ ಹಾಗು ರಾಜೇಶ್ ಫೇರವೋ ಅವರ ನಿರ್ಮಾಣದ ಈ ‘ಮಿಸ್ಟರ್ ಮದಿಮಯೆ’ ಸಿನಿಮಾಗೆ ಕೆ ಪಿ ಮಿಲನ್ ಸಂಗೀತ ಹಾಗು ಪ್ರಶಾಂತ್ ಧರ್ಮಸ್ಥಳ ಅವರ ಛಾಯಾಗ್ರಹಣ ಇದೆ. ನವೀನ್ ಆರ್ಯನ್ ಮತ್ತು ವಿನೋದ್ ನೃತ್ಯ ಸಂಯೋಜಿಸಿದ್ದಾರೆ. ಕೌರವ್ ವೆಂಕಟೇಶ್ ರವರ ಸಾಹಸ ಸುಕೇಶ್ ಶೆಟ್ಟಿ ಜಿ.ಎಸ್ ಗುರುಪುರ ಅವರ ಸಾಹಿತ್ಯ, ಸುಜೀತ್ ನಾಯಕ್ ರವರ ಸಂಕಲನ ಇದೆ. ವಸ್ತ್ರಾಲಂಕಾರ ನಿಖಿತಾ ಕೋಟ್ಯಾನ್, ನಿರ್ಮಾಣ ನಿರ್ವಾಹಕ : ಶ್ರೇಯಸ್ ಶೆಟ್ಟಿ, ಚಿತ್ರ ಮೇಲ್ವಿಚಾರಕ: ಹೆರಾಲ್ಡ್ ವಾಲ್ಡರ್, ಸೌಮ್ಯ ಚೇತನ್, ಸೌಜನ್ಯ ಶೆಟ್ಟಿ ಕಾರ್ಯಕಾರಿ ನಿರ್ಮಾಪಕರಾಗಿದ್ದಾರೆ.
ಮದುವೆ ಸಮಾರಂಭದ ಸುತ್ತ ನಡೆಯುವ ಕತೆಗೆ ಹಾಸ್ಯದ ಲೇಪನ ಹಚ್ಚಲಾಗಿದೆ. ಜೊತೆಗೆ ಸೆಂಟಿಮೆಂಟ್ ಎಲ್ಲವೂ ಇದೆ. ಪ್ರೇಕ್ಷಕರ ಅಭಿರುಚಿಯನ್ನು ಅರಿತು ಸಿನಿಮಾದ ಕತೆ ಹೆಣೆಯಲಾಗಿದೆ. ಕ್ಲೈಮಾಕ್ಸ್ ವಿಭಿನ್ನತೆಯಿಂದ ಹೊಂದಿದ್ದು, ಸಿನಿಮಾ ಪ್ರೇಕ್ಷಕರಿಗೆ ಸಂಪೂರ್ಣ ಮನರಂಜನೆ ಒದಗಿಸುತ್ತದೆ ಎಂದು ಸಿನಿಮಾದ ನಿರ್ದೇಶಕ ನವೀನ್ ಪೂಜಾರಿ ತಿಳಿಸಿದ್ದಾರೆ.