Olx ನಲ್ಲಿ ವಸ್ತು ಖರೀದಿಸುವುದಾಗಿ ನಂಬಿಸಿ ಮಹಿಳೆಗೆ 1.28 ಲ.ರೂ. ವಂಚನೆ.

ಉಡುಪಿ ಸೆ.11(ಉಡುಪಿ ಟೈಮ್ಸ್ ವರದಿ): ಓಎಲ್‌ಎಕ್ಸ್‌ನಲ್ಲಿ ಮಾರಾಟ ಮಾಡಲು ಇಟ್ಟಿದ್ದ ವಸ್ತು ಖರೀದಿಸುವುದಾಗಿ ತಿಳಿಸಿ ಮಹಿಳೆಯೊಬ್ಬರಿಗೆ 1.28 ಲಕ್ಷ ರೂ. ವಂಚಿಸಿರುವುದಾಗಿ ಉಡುಪಿ ಸೆನ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಆ.27 ರಂದು ಉ಼ಷಾ ಕಿರಣ್‌ ಅವರು OLX ನಲ್ಲಿ ಸ್ವತ್ತುಗಳ ಮಾರಾಟ ಮಾಡುವ ಬಗ್ಗೆ ಮಾಹಿತಿ ಹಾಕಿದ್ದರು. ಈ ನಡುವೆ ಓರ್ವ ವ್ಯಕ್ತಿಯು ಉಷಾ ಕಿರಣ್ ಅವರು ಮಾರಾಟ ಮಾಡಲು ಇಟ್ಟಿದ್ದ ಸ್ವತ್ತುಗಳನ್ನು ಖರೀದಿಸುವುದಾಗಿ ತಿಳಿಸಿ ಮೊಬೈಲ್ ನಂಬರ್ ಪಡೆದುಕೊಂಡಿದ್ದನು. ಹಾಗೂ ಓರ್ವ  ಮಹಿಳೆಯು ಕರೆ ಮಾಡಿ ತಾನು ಸ್ವತ್ತುಗಳನ್ನು ಖರೀದಿಸುವುದಾಗಿ ತಿಳಿಸಿ ತನ್ನಲ್ಲಿ ನಗದು ಹಣ ಇಲ್ಲ. ಗೂಗಲ್‌ ಪೇ ಇಲ್ಲ ಎಂದು ಹೇಳಿ ಉಷಾ ಅವರಿಂದ  ನಂಬರ್ ಪಡೆದುಕೊಂಡಿದ್ದಳು. ಬಳಿಕ  QR ಕೋಡ್‌ಗಳನ್ನು ಕಳುಹಿಸಿದ್ದು, ಉಷಾ ಅವರು QR ಕೋಡ್ ತೆರೆದಾಗ ಗೂಗಲ್‌ ಪೇ ಆಪ್‌ ತೆರೆದುಕೊಂಡಿದೆ. ಆ ನಂತರ ಉಷಾ ಕಿರಣ್ ಅವರ 3 ಬ್ಯಾಂಕ್‌ ಖಾತೆಗಳಿಂದ ಒಟ್ಟು 1,28,496 ರೂ. ಹಣ ಬೇರೆ ಖಾತೆಗೆ ವರ್ಗಾವಣೆ ಆಗಿರುವುದು ಕಂಡು ಬಂದಿದೆ. ಈ ಬಗ್ಗೆ ಉಡುಪಿ ಸೆನ್‌ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

 

.

Leave a Reply

Your email address will not be published. Required fields are marked *

error: Content is protected !!