ಉಡುಪಿ: ಪಾರ್ಟ್ ಟೈಮ್ ಜಾಬ್ ಆಮಿಷ- ಮಹಿಳೆಗೆ 1.47 ಲ. ರೂ. ವಂಚನೆ

ಉಡುಪಿ ಸೆ.9(ಉಡುಪಿ ಟೈಮ್ಸ್ ವರದಿ): ಪಾರ್ಟ್ ಟೈಮ್ ಕೆಲಸ‌ ನೀಡುವುದಾಗಿ ನಂಬಿಸಿ ಮಹಿಳೆಯೊಬ್ಬರಿಗೆ 1.47 ಲ.ರೂ.ವಂಚಿಸಿರುವ ಬಗ್ಗೆ ಸೆನ್ ಅಪರಾಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಈ ಬಗ್ಗೆ ವಂಚನೆಗೆ ಒಳಗಾದ ಭಾಗ್ಯಶ್ರೀ ಎಂಬವರು ಪೊಲೀಸರಿಗೆ ದೂರು ನೀಡಿದ್ದು, ಅದರಂತೆ ಸೆ.1 ರಂದು ಭಾಗ್ಯಶ್ರೀ ಅವರಿಗೆ ಅಪರಿಚಿತ ವ್ಯಕ್ತಿಗಳು ಕರೆ ಮಾಡಿ ಪಾರ್ಟ್ ಟೈಮ್ ಜಾಬ್ ನೀಡುವುದಾಗಿ ನಂಬಿಸಿ, ಆನ್ ಲೈನ್ Telegram ಎಪ್ಲಿಕೇಶನ್ ನಲ್ಲಿ ಲಿಂಕ್ ಕಳುಹಿಸಿದ್ದರು. ಅಲ್ಲದೆ ಟ್ರೆಡಿಂಗ್ ಮಾಡುವುದಾಗಿ ತಿಳಿಸಿ ಸೆ.1 ರಿಂದ  ಸೆ.3 ರ ವರೆಗೆ ಹಂತ ಹಂತವಾಗಿ ಒಟ್ಟು 1,47,239 ರೂ. ಹಣವನ್ನು ಆನ್ಲೈನ್ ಮೂಲಕ ಪಡೆದು ಉದ್ಯೋಗ ನೀಡದೆ, ಪಡೆದ ಹಣವನ್ನೂ ವಾಪಾಸು ನೀಡದೆ ವಂಚಿಸಿದ್ದಾರೆ ಎಂಬುದಾಗಿ ನೀಡಿದ ದೂರಿನಂತೆ ಸೆನ್‌ ಅಪರಾಧ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply

Your email address will not be published. Required fields are marked *

error: Content is protected !!