ಹೆಬ್ರಿ: ವ್ಯಕ್ತಿ ನಾಪತ್ತೆ
ಹೆಬ್ರಿ ಸೆ.9 (ಉಡುಪಿ ಟೈಮ್ಸ್ ವರದಿ): ಮುದ್ರಾಡಿ ಗ್ರಾಮದ ಮೇಲ್ಬೆಟ್ಟು ಬಿಡಿನ ರಸ್ತೆ ಎಂಬಲ್ಲಿನ ಮನೆಯಿಂದ ವ್ಯಕ್ತಿಯೊಬ್ಬರು ನಾಪತ್ತೆಯಾಗಿರುವ ಬಗ್ಗೆ ಹೆಬ್ರಿ ಠಾಣೆಯಲ್ಲಿ ದೂರು ದಾಖಲಾಗಿದೆ.
ಸ್ಥಳೀಯ ನಿವಾಸಿ ಸುದೀಪ.ಎಸ್.ಡಿ (36) ನಾಪತ್ತೆಯಾಗಿರುವವರು. ಇವರು ಸೆ.9 ರಂದು ಮುದ್ರಾಡಿ ಗ್ರಾಮದ ಮೇಲ್ಬೆಟ್ಟು ಬಿಡಿನ ರಸ್ತೆ ಎಂಬಲ್ಲಿರುವ ಅವರ ಮನೆಯಿಂದ ಸಂಜೆ 5:40ಕ್ಕೆ ಹೋದವರು ಮನೆಗೂ ಬಾರದೇ ಸಂಬಂಧಿಕರ ಮನೆಗೂ ಹೋಗದೇ ಕಾಣೆಯಾಗಿದ್ದಾರೆ ಎಂಬುದಾಗಿ ನಾಪತ್ತೆಯಾಗಿರುವವರ ತಂದೆ ನೀಡಿದ ದೂರಿನಂತೆ ಹೆಬ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.