ಬ್ರಹ್ಮಾವರ: ಕೆರೆಗೆ ಧುಮುಕಿದ ಕಾರು, ಅಪಾಯದಿಂದ ಪಾರಾದ ಪ್ರಯಾಣಿಕರು
ಬ್ರಹ್ಮಾವರ: (ಉಡುಪಿ ಟೈಮ್ಸ್ ವರದಿ) ಬುಧವಾರ (ಅ 7) ರಂದು ಸಂಜೆ ಯಡ್ತಾಡಿಯಿಂದ ಬಂಡಿಮಠಕ್ಕೆ ಬರುತ್ತಿದ್ದ ಕಾರೊಂದು ಚಾಲಕನ ನಿಯಂತ್ರಣ ತಪ್ಪಿ ಕೆರೆಗೆ ಬಿದ್ದಿದ್ದು, ಅದೃಷ್ಟವಶಾತ್ ಕಾರಿನಲ್ಲಿದ್ದ ಪ್ರಯಾಣಿಕರು ಯಾವುದೇ ಪ್ರಾಣಾಪಾಯವಿಲ್ಲದೆ ಪಾರಾಗಿದ್ದಾರೆ.
ಬಂಡಿಮಠಕ್ಕೆ ಬರುತ್ತಿದ್ದ ಮಾರುತಿ ಸುಜುಕಿ ಸಿಯಾಜ್ ಕಾರು ಕೂಡ್ಲಿ ರಾಮಕೃಷ್ಣ ಅಡಿಗರ ಮನೆಯ ಹತ್ತಿರ ಚಾಲಕನ ನಿಯಂತ್ರಣ ತಪ್ಪಿ ಸುಮಾರು 6 ಅಡಿ ಆಳದ ಕೆರೆಗೆ ಬಿದ್ದಿತ್ತು, ಈ ಮಾಹಿತಿ ತಿಳಿಯುತ್ತಿದ್ದಂತೆ ಸ್ಥಳೀಯರು ಸ್ಥಳಕ್ಕೆ ಆಗಮಿಸಿ ಕಾರಿನಲ್ಲಿದ್ದ ಮೂವರನ್ನು ರಕ್ಷಿಸಿದ್ದಾರೆ. ಕಾರನ್ನು ಸ್ಥಳೀಯರು ಸುಮಾರು 45 ನಿಮಿಷಗಳ ಕಾರ್ಯಾಚರಣೆಯ ಮೂಲಕ ಮೇಲೆಕ್ಕೆ ಎತ್ತಿದ್ದಾರೆ.
ಕಾರಿನಲ್ಲಿದ್ದವರು ತಮ್ಮ ಮನೆಯಾದ ಹನೆಹಳ್ಳಿಗೆ ಹೋಗುತ್ತಿದ್ದರು. ಮಂಗಳೂರಿನ ಕೋ ಅಪರೇಟಿವ್ ಸೊಸೈಟಿಯ ವ್ಯವಸ್ಥಾಪಕ ತಮ್ಮ ಕುಟುಂಬ ಸಮೇತ ಕಾರಿನಲ್ಲಿ ಸಂಚರಿಸುತ್ತಿದ್ದರು ಎಂದು ಸ್ಥಳೀಯರು ತಿಳಿಸಿದ್ದಾರೆ.