ಥಿಯೇಟರ್ ಓಪನ್ಗೆ ಬಂದಿದೆ ಮಾರ್ಗಸೂಚಿ.. ಏನಿದೆ? ಈ ವರದಿ ನೋಡಿ
ನವದೆಹಲಿ (ಉಡುಪಿ ಟೈಮ್ಸ್ ವರದಿ): ಕೊರೋನಾ ಹೊಡೆತಕ್ಕೆ ಸಿಲುಕಿ ಮುಚ್ಚಿದ್ದ ಥಿಯೇಟರ್, ಮಲ್ಟಿಪ್ಲೆಕ್ಸ್ ಗಳು ಬರೋಬ್ಬರಿ 7 ತಿಂಗಳ ಬಳಿಕ ಓಪನ್ ಆಗುತ್ತಿದೆ. ಅಕ್ಟೋಬರ್ 15ರಿಂದ ಚಿತ್ರಪ್ರೇಮಿಗಳು ಚಿತ್ರಮಂದಿರಕ್ಕೆ ಹೋಗಿ ಫಿಲಂ ವೀಕ್ಷಣೆ ಮಾಡಬಹುದು. ಆದರೆ, ಈ ಮೊದಲಿನಂತೆ ಥಿಯೇಟರ್ನಲ್ಲಿ ಜೋಡಿಹಕ್ಕಿಗಳಂತೆ ಪತಿ ಪತ್ನಿ ,ಪ್ರೇಮಿಗಳು ಅಕ್ಕ ಪಕ್ಕ ಒಟ್ಟಿಗೆ ಕುಳಿತು ಸಿನಿಮಾ ನೋಡಲು ಸಾಧ್ಯವಿಲ್ಲ.
ಕೇಂದ್ರ ಸರ್ಕಾರ ಥಿಯೇಟರ್ ಓಪನ್ ಸಂಬಂಧ ಇಂದು ಪ್ರಕಟಿಸಿರುವ ಮಾರ್ಗಸೂಚಿಯಲ್ಲಿ ಸಾಕಷ್ಟು ಬಿಗಿ ನಿಯಮಗಳನ್ನು ನೀಡಿದೆ . ಇದನ್ನು ನೋಡಿ ಚಿತ್ರ ರಂಗದವರು ತಲೆ ಕೆಡಿಸಿಕೊಂಡಿದ್ದಾರೆ.
ಮಾರ್ಗಸೂಚಿಯಲ್ಲಿ ಏನಿದೆ?
- ಥಿಯೇಟರ್ನಲ್ಲಿ ಶೇ.50ರಷ್ಟು ಸೀಟ್ ಮಾತ್ರ ಭರ್ತಿಗೆ ಅವಕಾಶ
- ಪ್ರೇಕ್ಷಕರು ಕುಳಿತುಕೊಳ್ಳದ ರೀತಿಯಲ್ಲಿ ಸೀಟ್ ಮಾರ್ಕ್ ಮಾಡಬೇಕು
- ಪ್ರೇಕ್ಷಕರು ಕುಳಿತುಕೊಳ್ಳುವ ಸೀಟ್ಗಳ ನಡುವೆ 6 ಅಡಿ ಅಂತರ ಇರಬೇಕು
- ಥಿಯೇಟರ್ಗೆ ಹೋಗುವವರು ಆರೋಗ್ಯ ಸೇತು ಆ್ಯಪ್ ಹೊಂದಿರಬೇಕು
- ಥಿಯೇಟರ್ಗೆ ಬರುವ ಪ್ರೇಕ್ಷಕರ ಮೊಬೈಲ್ ಸಂಖ್ಯೆ ಸಂಗ್ರಹ ಕಡ್ಡಾಯ
- ಹ್ಯಾಂಡ್ ವಾಶ್, ಸ್ಯಾನಿಟೈಸರ್ ಇರಿಸುವುದು ಕಡ್ಡಾಯ.
- ಮಧ್ಯಂತರ ವಿರಾಮದಲ್ಲಿ ಪ್ರೇಕ್ಷಕರ ಅನಗತ್ಯ ಓಡಾಟಕ್ಕೆ ನಿರ್ಬಂಧ
- ಅನಾರೋಗ್ಯ ಇದ್ದವರು ಥಿಯೇಟರ್ನಿಂದ ದೂರ ಉಳಿಯಬೇಕು
- ಅಡ್ವಾನ್ಸ್ ಬುಕಿಂಗ್, ಡಿಜಿಟಲ್ ಪೇಮೆಂಟ್ಗೆ ಒತ್ತು ಕೊಡಬೇಕು
- ಥಿಯೇಟರ್ನಲ್ಲಿರುವ ಅಂಗಡಿಗಳ ಮುಂದೆ ಸಾಮಾಜಿಕ ಅಂತರ ಕಡ್ಡಾಯ
- ಪ್ಯಾಕ್ ಮಾಡಿದ ಆಹಾರ ಪದಾರ್ಥಗಳಿಗಷ್ಟೇ ಅವಕಾಶ ನೀಡಬೇಕು
- ಸಿನಿಮಾ ಹಾಲ್ನಲ್ಲಿ ಆಹಾರ ಪದಾರ್ಥ ಪೂರೈಸುವಂತಿಲ್ಲ
- ಉಸಿರಾಟಕ್ಕೆ ಸಂಬಂಧಿಸಿದ ಶಿಷ್ಟಾಚಾರಗಳ ಪಾಲನೆ ಕಡ್ಡಾಯ
- ಏರ್ ಕಂಡೀಷನ್ ಮಟ್ಟ 24 ರಿಂದ 30 ಡಿಗ್ರಿ ನಡುವೆ ಇರಬೇಕು.
ಈ ನಿಯಮಗಳನ್ನು ಕಟ್ಟು ನಿಟ್ಟಾಗಿ ಪಾಲಿಸಿದ್ದಲ್ಲಿ ಮಾತ್ರ ಥಿಯೇಟರ್, ಮಲ್ಟಿಪ್ಲೆಕ್ಸ್ ತೆರೆಯುವ ಅವಕಾಶವಿರುತ್ತದ್ದೆ.