ಆಗಸ್ಟ್ 14 ರೊಳಗೆ ಎಲ್ಲಾ ಅನಧಿಕೃತ ಶಾಲೆಗಳನ್ನು ಮುಚ್ಚಿಸುವಂತೆ ಸೂಚನೆ

ಬೆಂಗಳೂರು: ಕರ್ನಾಟಕ ಶಿಕ್ಷಣ ಕಾಯಿದೆ-1983 ಸೆಕ್ಷನ್ -30 ಮತ್ತು 31ರಂತೆ ನೋಂದಣಿ ಅನುಮತಿಯನ್ನು ಪಡೆಯದ ಶಾಲೆಯನ್ನು ನಡೆಸುತ್ತಿದ್ದಲ್ಲಿ ಅಂತಹ ಶಾಲೆಗಳನ್ನು ಆ. 14 ರೊಳಗಾಗಿ ಮುಚ್ಚಿಸುವಂತೆ ಶಾಲಾ ಶಿಕ್ಷಣ ಇಲಾಖೆಯ ಆಯುಕ್ತರು ಸೂಚನೆ ನೀಡಿದ್ದಾರೆ.

ಈ ಬಗ್ಗೆ ಶಾಲಾ ಶಿಕ್ಷಣ ಇಲಾಖೆಯ ಜಿಲ್ಲಾ ಉಪ ನಿರ್ದೇಶಕರಿಗೆ ಪತ್ರ ಬರೆದಿರುವ ಆಯುಕ್ತರು, ಅನಧಿಕೃತ ಶಾಲೆಗಳನ್ನು ನಿಯಮಾನುಸಾರ ಮುಚ್ಚಿಸಿ ಪತ್ರಿಕಾ ಪುಕಟನೆಯನ್ನು ನೀಡಿ ಅನಧಿಕೃತ ಶಾಲೆ ಎಂಬುದಾಗಿ ಸಾರ್ವಜನಿಕವಾಗಿ/ಪೋಷಕರಿಗೆ ತಿಳಿಯುವ ರೀತಿಯಲ್ಲಿ ಕಚೇರಿಯ ಸೂಚನಾ ಫಲಕದಲ್ಲಿ ಪಕಟಿಸುವಂತೆ ಸೂಚಿಸಿದ್ದಾರೆ.

‘ಜಿಲ್ಲಾ ವ್ಯಾಪ್ತಿಯಲ್ಲಿ ಯಾವುದೇ ನೋಂದಣಿ ಪಡೆಯದ ನಡೆಯುತ್ತಿರುವ ಶಾಲೆಗಳು ಯಾವುದು ಇರುವುದಿಲ್ಲವೆಂದು ದೃಢೀಕರಣ ನೀಡತಕ್ಕದ್ದು. ತದನಂತರ ಸಾರ್ವಜನಿಕರಿಂದ ನಿಮ್ಮ ಜಿಲ್ಲಾ ವ್ಯಾಪ್ತಿಯಲ್ಲಿ ನೋಂದಣಿ ಪಡೆಯದ ಅನಧಿಕೃತವಾಗಿ ಶಾಲೆಗಳು ನಡೆಯುತ್ತಿವ ಎಂದು ದೂರು ಬಂದಲ್ಲಿ ನಿಮ್ಮನ್ನೇ ನೇರ ಹೊಣೆಗಾರರನ್ನಾಗಿ ಮಾಡಲಾಗುವುದುʼ ಎಂದು ಎಚ್ಚರಿಕೆ ನೀಡಿದ್ದಾರೆ.

Leave a Reply

Your email address will not be published. Required fields are marked *

error: Content is protected !!