ಕರ್ನಾಟಕ ಅಂಚೆ ವೃತ್ತದಲ್ಲಿ ಡಾಕ್ ಸೇವಕ್ ಹುದ್ದೆ ನಿರೀಕ್ಷೆಯಲ್ಲಿದ್ದವರಿಗೆ ಗುಡ್ ನ್ಯೂಸ್

ಬೆಂಗಳೂರು ಆ.4: ಕರ್ನಾಟಕ ಅಂಚೆ ವೃತ್ತದಲ್ಲಿ ಡಾಕ್ ಸೇವಕ್ ಹುದ್ದೆ ನಿರೀಕ್ಷೆಯಲ್ಲಿದ್ದ ಅಭ್ಯರ್ಥಿಗಳಿಗೆ ಭಾರತೀಯ ಅಂಚೆ ಇಲಾಖೆ ಸಿಹಿ ಸುದ್ದಿ ನೀಡಿದೆ. 

ಕರ್ನಾಟಕದ ವಿವಿಧ ಜಿಲ್ಲೆಗಳಲ್ಲಿ ಖಾಲಿ ಇರುವ ಒಟ್ಟು 1714 ಗ್ರಾಮೀಣ ಡಾಕ್ ಸೇವಕ್ ಉದ್ಯೋಗ ನೇಮಕಾತಿಗೆ ಅಧಿಸೂಚನೆ ಹೊರಡಿಸಲಾಗಿದ್ದು, 10 ನೇ ತರಗತಿ ಓದಿರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ.

ಈ ಉದ್ಯೋಗದ ಬಗ್ಗೆ ಹೆಚ್ಚಿನ ಮಾಹಿತಿ ತಿಳಿದುಕೊಳ್ಳಲು ಮುಂದೆ ಓದಿ…..

ಬ್ರಾಂಚ್ ಪೋಸ್ಟ್ ಮಾಸ್ಟರ್ (ಬಿಪಿಎಂ) ಅಸಿಸ್ಟೆಂಟ್ ಬ್ರಾಂಚ್ ಪೋಸ್ಟ್ ಮಾಸ್ಟರ್ (ಎಬಿಪಿಎಂ) ಹುದ್ದೆಗಳ ನೇಮಕಾತಿ ನಡೆಯಲಿದೆ. ಕರ್ನಾಟಕ ಅಂಚೆ ವೃತ್ತದಿಂದ ಒಟ್ಟು 1214 ಗ್ರಾಮೀಣ ಡಾಕ್ ಸೇವಕ್ (ಪಿಬಿಎಂ/ ಎಬಿಪಿಎಂ) ಹುದ್ದೆ ಭರ್ತಿಗೆ ಅಧಿಸೂಚನೆ ಪ್ರಕಟಿಸಲಾಗಿದೆ.

ಅಧಿಸೂಚನೆ ಹೀಗಿದೆ:-

ಹುದ್ದೆ ವಿವರ: ಕರ್ನಾಟಕ ಅಂಚೆ ವೃತ್ತದಿಂದ ಒಟ್ಟು 1214 ಗ್ರಾಮೀಣ ಡಾಕ್ ಸೇವಕ್ (ಪಿಬಿಎಂ/ ಎಬಿಪಿಎಂ) ಹುದ್ದೆಗೆ ಭರ್ತಿಗೆ ಅಧಿಸೂಚನೆ ಪ್ರಕಟಿಸಲಾಗಿದೆ.

ರಾಜ್ಯದ ಜಿಲ್ಲೆಗಳಲ್ಲಿರುವ ಹುದ್ದೆಗಳ ವಿವರ:-

ಮಂಗಳೂರು- 52

ಮೈಸೂರು- 43

ನಂಜನಗೂಡು-41

ಪುತ್ತೂರು- 89

ರಾಯಚೂರು- 49

ಆರ್‌ಎಂಎಸ್ ಎಚ್‌ಬಿ- 44

ಆರ್.ಎಂಎಸ್ ಕ್ಯೂ 6

ಶಿವಮೊಗ್ಗ-74

ಉಡುಪಿ-110

ವಿಜಯಪುರ- 65

ಯಾದಗಿರಿ-33

ಬಾಗಲಕೋಟೆ- 29

ಬಳ್ಳಾರಿ- 43

ಬೆಳಗಾವಿ- 42

ಬೆಂಗಳೂರು ಪೂರ್ವ-11

ಬೆಂಗಳೂರು ದಕ್ಷಿಣ- 4

ಬೆಂಗಳೂರು ಪಶ್ಚಿಮ- 6

ಬೀದರ್- 49

ಚನ್ನಪಟ್ಟಣ- 66

ಚಿಕ್ಕಮಗಳೂರು- 63

ಚಿಕ್ಕೋಡಿ- 45

ಚಿತ್ರದುರ್ಗ- 51

ದಾವಣಗೆರೆ- 47

ಧಾರವಾಡ-36

ಗದಗ- 63

ಗೋಕಾಕ್- 13

ಹಾಸನ- 84

ಹಾವೇರಿ-33

ಕಲಬುರ್ಗಿ 44

ಕಾರವಾರ- 53

ಕೊಡಗು- 44

ಕೋಲಾರ- 75

ಮಂಡ್ಯ-78

ವಯೋಮಿತಿ: ಈ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಕನಿಷ್ಠ 18 ವರ್ಷ ತುಂಬಿರಬೇಕು. ಗರಿಷ್ಠ 40 ವರ್ಷಗಳಾಗಿರಬೇಕು. ಒಬಿಸಿ ಅಭ್ಯರ್ಥಿಗಳಿಗೆ 3 ವರ್ಷ, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಅಭ್ಯರ್ಥಿಗಳಿಗೆ 5 ವರ್ಷ, ವಿಶೇಷಚೇತನ ಅಭ್ಯರ್ಥಿಗಳಿಗೆ 10 ವರ್ಷ ವಯೋಮಿತಿ ಸಡಿಲಿಕೆ ಇದೆ.

ವಿದ್ಯಾರ್ಹತೆ: ಈ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು 10ನೇ ತರಗತಿಯನ್ನು ಪೂರ್ಣಗೊಳಿಸಿರಬೇಕು.

ವೇತನ: ಗ್ರಾಮೀಣ ಡಾಕ್ ಸೇವಕ್ ಬ್ರಾಂಚ್ ಪೋಸ್ಟ್ ಮಾಸ್ಟರ್ (ಬಿಪಿಎಂ) ಹುದ್ದೆಗೆ 12,000-29,380ರೂವರೆಗೆ ಗ್ರಾಮೀಣ ಡಾಕ್ ಸೇವಕ್ ಅಸಿಸ್ಟೆಂಟ್ ಬ್ರಾಂಚ್ ಪೋಸ್ಟ್ ಮಾಸ್ಟರ್ (ಎಬಿಪಿಎಂ) ಹುದ್ದೆಗೆ 10,000-24,470ರೂ. ವರೆಗೆ ವೇತನ ನಿಗದಿಪಡಿಸಲಾಗಿದೆ.

ಆಯ್ಕೆ: ಈ ಹುದ್ದೆಗಳಿಗೆ ಅಭ್ಯರ್ಥಿಗಳನ್ನು ಮೆರಿಟ್ ಪಟ್ಟಿ, ದಾಖಲಾತಿ ಪರಿಶೀಲನೆ ಮತ್ತು ಸಂದರ್ಶನದ ಮೂಲಕ ಆಯ್ಕೆ ಮಾಡಲಾಗುವುದು.

ಅರ್ಜಿ ಸಲ್ಲಿಕೆ: ಈ ಹುದ್ದೆಗಳಿಗೆ ಅಭ್ಯರ್ಥಿಗಳು ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ. ಮಹಿಳೆಯರು, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ವಿಕಲ ಚೇತನ, ತೃತೀಯ ಲಿಂಗಿಗಳಿಗೆ ಯಾವುದೇ ಅರ್ಜಿ ಶುಲ್ಕ ಇರುವುದಿಲ್ಲ. ಇತರೆ ಅಭ್ಯರ್ಥಿಗಳಿಗೆ 100 ರೂ. ಅರ್ಜಿ ಶುಲ್ಕ ನಿಗದಿಪಡಿಸಲಾಗಿದೆ.

ಈ ಹುದ್ದೆ ಕುರಿತು ಸಂಪೂರ್ಣ ವಿವರಣೆ, ಅರ್ಜಿ ಸಲ್ಲಿಕೆ ಮತ್ತು ಅಧಿಕೃತ ಅಧಿಸೂಚನೆಗೆ ಅಭ್ಯರ್ಥಿಗಳು ಭಾರತೀಯ ಅಂಚೆ ಇಲಾಖೆಯ ಅಧಿಕೃತ ಜಾಲತಾಣವಾದ indiapost.gov.in ಗೆ ಭೇಟಿ ನೀಡಬಹುದಾಗಿದೆ.

ಈ ಹುದ್ದೆಗೆ ಅಭ್ಯರ್ಥಿಗಳು ಆಗಸ್ಟ್ 3ರಿಂದ ಅರ್ಜಿ ಸಲ್ಲಿಕೆ ಮಾಡಬಹುದಾಗಿದ್ದು, ಅರ್ಜಿ ಸಲ್ಲಿಕೆಗೆ ಕಡೆಯ ದಿನಾಂಕ ಆಗಸ್ಟ್ 23 ಆಗಿದೆ. ಅರ್ಜಿ ತಪ್ಪು ಸರಿಪಡಿಸುವಿಕೆಗೆ ಆಗಸ್ಟ್ 24ರಿಂದ ಆಗಸ್ಟ್ 26ರ ವರೆಗೆ ಕಾಲ ಅವಕಾಶ ನೀಡಲಾಗಿದೆ

Leave a Reply

Your email address will not be published. Required fields are marked *

error: Content is protected !!