ಸಾಹುಕಾರನ ಸಿಡಿ ಪ್ರಕರಣಕೆ ಇನ್ನಷ್ಟು ತಿರುವು ಸಾಧ್ಯತೆ!
ಬೆಂಗಳೂರು: ಮಾಜಿ ಸಚಿವ ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣಕ್ಕೆ ಸಂಬಂದಿಸಿ ಇನ್ನಷ್ಟು ಮಾಹಿತಿಗಳು ಇಂದು ಬಯಲಿಗೆ ಬರುವ ಸಾಧ್ಯತೆಗಳಿವೆ. ಇಂದು(ಏ.5) ಸಂಜೆ 4 ಗಂಟೆಗೆ ಯುವತಿ ಜಡ್ಜ್ ಮುಂದೆ ಹಾಜರಾಗುತ್ತಿದ್ದು, ಇದೀಗ ಯುವತಿಯ ಹೇಳಿಕೆ ಕುರಿತು ತೀವ್ರ ಕುತೂಹಲ ಮೂಡಿದೆ.
ಪ್ರಕರಣಕ್ಕೆ ಸಂಬಂಧಿಸಿ ನ್ಯಾಯಾಧೀಶರ ಮುಂದೆ ಸಿಡಿ ಸಂತ್ರಸ್ತೆ ಹಾಜರಾಗಿ ಹೇಳಿಕೆ ನೀಡೋದಕ್ಕೆ ಅನುಮತಿ ಕೋರಿ ಯುವತಿಯ ಪರ ವಕೀಲರು ನಾಯಾಲಯದಲ್ಲಿ ಸಲ್ಲಿಸಿದ್ದ ಕೋರಿಕೆಗೆ ನ್ಯಾಯಾಲಯ ಸಮ್ಮತಿ ಸೂಚಿಸಿತ್ತು. ಅದರಂತೆ ಸಿಡಿ ಸಂತ್ರಸ್ತ ಯುವತಿಯ ಸಿಆರ್ಪಿಸಿ 164 ರ ಅಡಿಯಲ್ಲಿ ಹೇಳಿಕೆ ನೀಡೋದಕ್ಕೆ ಇಂದು ಸಂಜೆ 4 ಗಂಟೆಗೆ ನ್ಯಾಯಧೀಶರ ಮುಂದೆ ಹಾಜರಾಗಲಿದ್ದಾರೆ ಎನ್ನಲಾಗುತ್ತಿದೆ. ಹೀಗಾಗಿ ಸಂತ್ರಸ್ತ ಯುವತಿ ನ್ಯಾಯಾಧೀಶರ ಮುಂದೆ ಏನು ಹೇಳಲಿದ್ದಾರೆ ಎಂಬುದು ತೀವ್ರ ಕುತೂಹಲ ಮೂಡಿಸಿದೆ.