ಮಣಿಪಾಲ: 10 ಲಕ್ಷ ರೂ. ಮೌಲ್ಯದ ಆಭರಣ ಕಳವು- ಅತ್ತೆಯ ವಿರುದ್ಧ ಅಳಿಯನಿಂದ ದೂರು
ಮಣಿಪಾಲ ಜೂ.23(ಉಡುಪಿ ಟೈಮ್ಸ್ ವರದಿ)ಇಲ್ಲಿನ ಈಶ್ವರ ನಗರದ ಮನೆಯೊಂದರಲ್ಲಿ 10.10 ಲಕ್ಷ ರೂ. ಮೌಲ್ಯದ ಚಿನ್ನ ಹಾಗೂ ಬೆಳ್ಳಿಯ ಆಭರಣಗಳನ್ನು ಕದ್ದು ಪರಾರಿಯಾಗಿದ್ದಾರೆ ಎಂಬುದಾಗಿ ಅಳಿಯನೇ ಅತ್ತೆಯ ವಿರುದ್ಧ ಮಣಿಪಾಲ ಠಾಣೆಯಲ್ಲಿ ದೂರು ನೀಡಿದ್ದಾರೆ.
ಈ ಬಗ್ಗೆ ಡಾ. ಭಾವಾನಾರಿ ಮಲ್ಲಿಕಾರ್ಜುನ್ ಎಂಬವರು ಪೊಲೀಸರಿಗೆ ದೂರು ನೀಡಿದ್ದು, ಅದರಂತೆ ಇವರು ಮಾ.28 ರಂದು ಬೆಳಿಗ್ಗೆ ಮನೆಯ ಬೆಡ್ ರೂಮ್‌ನ ಕಪಾಟಿನಲ್ಲಿದ್ದ ನಗದು 5000 ರೂ. ಹಾಗೂ 10,10,500 ರೂ. ಮೌಲ್ಯದ ಚಿನ್ನ ಮತ್ತು ಬೆಲ್ಲಿಯ ಆಭರಣಗಳನ್ನು ಅವರ ಹೆಂಡತಿಯ ತಾಯಿ ಎಂ.ಶೈಲಜಾ ಕುಮಾರಿ ಎಂಬುವವರು ಕಳವು ಮಾಡಿಕೊಂಡು ಹೋಗಿದ್ದಾರೆ ಎಂಬುದಾಗಿ ನೀಡಿದ ದೂರಿನಂತೆ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.