ಕಂಚಿನಡ್ಕ: ಟೋಲ್ ನಿರ್ಮಾಣವನ್ನು ಕ್ಯೆಬಿಡದಿದ್ದಲ್ಲಿ ಉಗ್ರ ಹೋರಾಟ: ರಮೀಜ್ ಹುಸೇನ್ ಎಚ್ಚರಿಕೆ
ಉಡುಪಿ (ಉಡುಪಿ ಟೈಮ್ಸ್ ವರದಿ): ಪಡುಬಿದ್ರಿ ಕಂಚಿನಡ್ಕ ಭಾಗದ ರಾಜ್ಯ ಹೆದ್ದಾರಿಯಲ್ಲಿ ಟೋಲ್ ನಿರ್ಮಾಣಕ್ಕೆ ಕಾಪು ಬ್ಲಾಕ್ ಯುವ ಕಾಂಗ್ರೆಸ್ ಅಧ್ಯಕ್ಷ ರಮೀಜ್ ಹುಸೇನ್ ವಿರೋಧ ವ್ಯಕ್ತಪಡಿಸಿದ್ದಾರೆ.
ಈ ಬಗ್ಗೆ ಪತ್ರಿಕಾ ಹೇಳಿಕೆ ನೀಡಿರುವ ಅವರು ಪಡುಬಿದ್ರಿ- ಕಾರ್ಕಳ ರಾಜ್ಯ ಹೆದ್ದಾರಿಯ ಕಂಚಿನಡ್ಕ ಭಾಗದಲ್ಲಿ ರಾಜ್ಯ ಸರಕಾರ ಟೋಲ್ ಗೇಟ್ ನಿರ್ಮಾಣ ಮಾಡುವ ಯೋಜನೆ ಯಲ್ಲಿದ್ದು. ಯಾವುದೇ ಕಾರಣಕ್ಕೂ ಈ ಭಾಗದಲ್ಲಿ ಟೋಲ್ ನಿರ್ಮಾಣ ಮಾಡಲು ಬಿಡುವುದಿಲ್ಲ. ಈಗಾಗಲೇ ಪಡುಬಿದ್ರಿಯ ಜನತೆ ಮಂಗಳೂರು ಹೋಗಬೇಕಾದರೆ ಹೆಜಮಾಡಿ ಹಾಗೂ ಸುರತ್ಕಲ್ ಟೋಲ್ ಪಾವತಿಸುತಿದ್ದು ಇದೀಗ ನೂತನ ಟೋಲ್ ಗೇಟ್ ನಿರ್ಮಾಣ ಯೋಜನೆ ಗಾಯದ ಮೇಲೆ ಬರೆ ಎಳೆದಂತೆ ಅಗಿದೆ. ಕೂರೂನಾದಿಂದ ಜನರ ಅರ್ಥಿಕ ಪರಿಸ್ಥಿತಿ ಹದಗೆಟ್ಟಿದ್ದು ಈ ಸಂದರ್ಭದಲ್ಲಿ ರಾಜ್ಯ ಸರಕಾರ ಇಂತಹ ನಿಲವು ತೆಗೆದು ಕೂಂಡರೆ ಜನ ಸಂಚಾರಿಸುವುದೆ ಕಷ್ಟಕರವಾಗಿದೆ. ರಾಜ್ಯ ಸರಕಾರದ ಟೋಲ್ ಸುಂಕ ಹೆಚ್ಚಳದಿಂದ ಜನ ರೊಚ್ಚಿಗೆದ್ದಿದಾರೆ. ಟೋಲ್ ಭಾಗ್ಯ ಕರುಣಿಸುತಿರುವ ರಾಜ್ಯಸರಕಾರ ಟೋಲ್ ನಿರ್ಮಾಣವನ್ನು ಕ್ಯೆಬಿಡದಿದ್ದಲ್ಲಿ ಉಗ್ರ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.