ರಾಜಕೀಯಕ್ಕಾಗಿ ಬಡವರ ಹೊಟ್ಟೆಗೆ ಕಲ್ಲು ಹಾಕುವುದೇ ಬಿಜೆಪಿ ಹಣೆಬರಹ ಕೆ. ಕೃಷ್ಣಮೂರ್ತಿ
ಉಡುಪಿ ಜೂ.22(ಉಡುಪಿ ಟೈಮ್ಸ್ ವರದಿ): ರಾಜಕೀಯಕ್ಕಾಗಿ ಬಡವರ ಹೊಟ್ಟೆಗೆ ಕಲ್ಲು ಹಾಕುವುದೇ ಬಿಜೆಪಿ ಹಣೇಬರಹ ಎಂದು ಕಾಂಗ್ರೆಸ್ ಮುಖಂಡ ಕೆ.ಕೃಷ್ಣಮೂರ್ತಿ ಆಚಾರ್ಯ ಅವರು ಹೇಳಿದ್ದಾರೆ.
ಈ ವಿಚಾರವಾಗಿ ಮಾತನಾಡಿದ ಅವರು, ಮೊದಲು ಈ
ಆಹಾರ ಧಾನ್ಯ ವಿತರಣೆ ಯೋಜನೆ ಪ್ರಾರಂಭಿಸಿದ್ದು ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರು ಇದ್ದಾಗ. ಬಳಿಕ ಅದನ್ನು ಸಿದ್ದರಾಮಯ್ಯ ಅವರು ಮೊದಲು ಮುಖ್ಯಮಂತ್ರಿ ಆಗುವಾಗ 2013 ರಲ್ಲಿ ಕರ್ನಾಟಕಕ್ಕೆ ಜಾರಿ ಮಾಡಿದ್ದರು. ರಾಜಕೀಯಕ್ಕಾಗಿ ಬಡವರ ಹೊಟ್ಟೆಗೆ ಕಲ್ಲುಹಾಕುವ ಕೆಲಸ, ದಬ್ಬಾಳಿಕೆ, ಇಡೀ ದಿನ ಸುಳ್ಳು ಹೇಳುವ ಕೆಲಸವನ್ನು ಜನರು ಹೆಚ್ಚು ದಿನ ನಂಬುವುದಿಲ್ಲ.
ಬಿಜೆಪಿಯ ಡೊಂಗಿತನ ಜನರಿಗೆ ಈಗ ಗೊತ್ತಾಗಿದೆ. ನಿಮಗೆ ಸಾಧ್ಯ ಆದ್ರೆ ಪೆಟ್ರೋಲ್, ಡೀಸೆಲ್, ನಿತ್ಯ ಬಳಕೆಯ ವಸ್ತುಗಳ ಗಗನಕ್ಕೇರಿರುವ ಬೆಲೆಯನ್ನು ನಿಯಂತ್ರಣ ಮಾಡಿ. ಬರೇ ರಾಜಕೀಯ ಮಾಡಿ ಬಡವರ ಹೊಟ್ಟೆಗೆ ಹೊಡೆಯುವುದು ಬೇಡ ಎಂದರು.
ಬಿಜೆಪಿಗೆ ಬಡವರ ಬಗ್ಗೆ ಕಾಳಜಿ ಇಲ್ಲ ಎಂದ ಅವರು, ನೀವು ಬಡವರ ಸಾಲ ಮನ್ನ ಮಾಡುವಾಗ ಲೆಕ್ಕ ತೋರಿಸ್ತೀರಾ ಆದರೆ ಶ್ರೀಮಂತರ ಸಾಲ ಮನ್ನ ಮಾಡುವಾಗ ಲೆಕ್ಕ ಪಕ್ಕ ಏನು ಇಲ್ಲ. ಇದು ಬಿಜೆಪಿಯ ಹಣೇಬರಹ ಎಂದಿದ್ದಾರೆ.
ಇದೇ ವೇಳೆ ಯೋಜನೆ ಆರಂಭಿಸುವಾಗ ಪ್ರಧಾನಿಯನ್ನು ಕೇಳಿಲ್ಲ ಎಂಬ ಬಿಜೆಪಿ ಟೀಕೆಗೆ ಪ್ರತಿಕ್ರಿಯೆ ನೀಡಿದ ಅವರು, ಯಾವುದೇ ಸರಕಾರ ಬಂದಾಗ ಮುಖ್ಯಮಂತ್ರಿಗಳು ಯೋಜನೆ ಜಾರಿಗೊಳಿಸುವಾಗ ಪ್ರಧಾನ ಮಂತ್ರಿ ಬಳಿ ಕೇಳಬೇಕೆಂದಿಲ್ಲ. ತಮಿಳುನಾಡು ಸರಕಾರ ತಿಂಗಳಿಗೆ 1500 ರೂ. ನೀಡುತ್ತದೆ. ಅಕ್ಕಿ ನೀಡುತ್ತಿದೆ ಅದನ್ನೆಲ್ಲಾ ಮೋದಿಯತ್ರ ಕೇಳಿಯೇ ಮಾಡ್ತಿದ್ದಾರಾ ಎಂದು ಪ್ರಶ್ನಿಸಿದರು.