ಯಶೋದ ಆಟೋ ಚಾಲಕರ ಸಂಘ- ವಿಶ್ವ ಪರಿಸರ ದಿನಾಚರಣೆ
ಉಡುಪಿ ಜೂ.20(ಉಡುಪಿ ಟೈಮ್ಸ್ ವರದಿ): ಯಶೋಧ ಆಟೋ ಚಾಲಕರ ಮತ್ತು ಮಾಲಕರ ಸಂಘದ ಇವರ ವತಿಯಿಂದ ಜಿಲ್ಲಾಧ್ಯಕ್ಷರಾದ ಕೆ. ಕೃಷ್ಣಮೂರ್ತಿ ಆಚಾರ್ಯರ ನೇತೃತ್ವದಲ್ಲಿ ವಿಶ್ವ ಪರಿಸರ ದಿನಾಚರಣೆಯನ್ನು ಜಿಲ್ಲೆಯ ಎಲ್ಲಾ ಆಟೋ ಸ್ಟ್ಯಾಂಡ್ ಗಳಲ್ಲಿ ಸಾಂಕೇತಿಕವಾಗಿ ಆಚರಿಸಲಾಯಿತು.
ಕಿನ್ನಿಮುಲ್ಕಿ ಗೋಪುರದ ಬಳಿ ಇರುವ ಅಟೋ ಸ್ಟ್ಯಾಂಡಿನಲ್ಲಿ ಆರಂಭಗೊಂಡ ಕಾರ್ಯಕ್ರಮದಲ್ಲಿ ನೂತನ ಅಧ್ಯಕ್ಷರ ಸಮ್ಮುಖದಲ್ಲಿ ರಿಕ್ಷಾ ಚಾಲಕರಿಗೆ ಔಷಧಿಯ ಗುಣವುಳ್ಳ ಫಲವನ್ನು ಕೊಡುವ, ಹಾಗೂ ಇತರೆ ಗಿಡಗಳನ್ನು ಸದಾಶಿವ ಸೇರಿಗಾರ್ ಅವರಿಗೆ ನೀಡುವುದರ ಮೂಲಕ ಉದ್ಘಾಟನೆ ಮಾಡಲಾಯಿತು.
ಈ ವೇಳೆ ಜಿಲ್ಲಾಧ್ಯಕ್ಷರಾದ ಕೃಷ್ಣಮೂರ್ತಿ ಆಚಾರ್ಯರು ಮಾತಾನಾಡಿ, ಸತತ 20 ವರ್ಷಗಳಿಂದ ಹವಾಮಾನ ವೈಪರೀತ್ಯ ಹೊಂದಿದೆ, ವ್ಯಜ್ಞಾನಿಕವಾಗಿ ಬದುಕಲು, ಮನುಷ್ಯನು ಜೀವಿಸಲು ಮಳೆ ಗಾಳಿ ಬೇಕೇ ಬೇಕು ಆದ್ದರಿಂದ ಗಿಡಗಳನ್ನು ವಿತರಣೆ ಮಾಡುವ ಕಾರ್ಯಕ್ರಮವನ್ನು ಹಮ್ಮಿಕೊಂಡಿರುತ್ತೇವೆ ಎಂದು ಹೇಳಿದರು. ಹಾಗೂ 50 ಆಟೋ ನಿಲ್ದಾಣಗಳಿಗೆ ಸಸಿಗಳನ್ನು ವಿತರಿಸಿದರು.
ಕಾರ್ಯಕ್ರಮದಲ್ಲಿ ಯುನಿಯನ್ ಅಧ್ಯಕ್ಷರಾದ ದಿವಾಕರ್ ಪೂಜಾರಿ, ಕಾರ್ಯಾಧ್ಯಕ್ಷರಾದ ಸದಾಶಿವ ಪೂಜಾರಿ ಮತ್ತು ನಿಕಟಪೂರ್ವ ಪ್ರಧಾನ ಕಾರ್ಯದರ್ಶಿಗಳಾದ ಪ್ರವೀಣ್ ಕುಂಜಿಬೆಟ್ಟು, ಹರೀಶ್ ಅಮೀನ್, ಉಪಾಧ್ಯಕ್ಷರಾದ ನವೀನ್ ಅಂಚನ್, ಕೃಷ್ಣ ರಾಜ್ ರಾವ್, ಗಂಗಾಧರ್ ಪಿತ್ರೋಡಿ, ಪ್ರಸಾದ್ ತಂತ್ರಿ, ಪ್ರಧಾನ ಕಾರ್ಯದರ್ಶಿ ಸುನೀಲ್ ಬೈಲಕೆರೆ, ಕೋಶಾಧಿಕಾರಿ ಗಣೇಶ್ ಸುವರ್ಣ, ಜೊತೆ ಕಾರ್ಯದರ್ಶಿ ಪ್ರಸಾದ್ ಆಚಾರ್ಯ, ಉಮೇಶ್ ಶೆಟ್ಟಿ, ರಾಮಚಂದ್ರ ನಿಟ್ಟೂರು, ಹನೀಫ್, ಸಂತೋಷ್ ಸೇರಿಗಾರ್ ಮತ್ತು ಅಶೋಕ್ ಪೂಜಾರಿ ಬೀಡಿನಗುಡ್ಡೆ ಮತ್ತು ಯುನಿಯನ್ನ ಸದಸ್ಯರುಗಳು ಉಪಸ್ಥಿತರಿದ್ದರು.